ದರ್ಶನ್ ನೋಡಲು ಕಿಕ್ಕಿರಿದ ಫ್ಯಾನ್ಸ್; ಜೀಪ್ ಹಿಂದೆ ಪೊಲೀಸರ ಓಟ
ನಟ ದರ್ಶನ್(Darshan Thoogudeepa) ಮತ್ತು ಗ್ಯಾಂಗ್ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜೂ.12) ಆರೋಪಿ ದರ್ಶನ್ ಹಾಗೂ ಪವಿತ್ರಾ ಸೇರಿ ಎಲ್ಲಾ ಆರೋಪಿಗಳನ್ನು ಕರೆದುಕೊಂಡು ಹೋಗಿ ಕೊಲೆ ನಡೆದ ಪಟ್ಟಣಗೆರೆ(Pattanagere)ಶೆಡ್‌ನಲ್ಲಿ ಸ್ಥಳ ಮಹಜರು ನಡೆಸಿದ್ದರು. ಸ್ಥಳ ಮಹಜರು ಮುಗಿಸಿ ಬರುವಾಗ ನಟ ದರ್ಶನ್ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಈ ಹಿನ್ನಲೆ ಪೊಲೀಸರು ಜೀಪ್ ಹಿಂದೆ ಓಡುವ ಪರಿಸ್ಥಿತಿ ಎದುರಾಯಿತು.
ಬೆಂಗಳೂರು, ಜೂ.12: ನಟ ದರ್ಶನ್(Darshan Thoogudeepa) ಮತ್ತು ಗ್ಯಾಂಗ್ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜೂ.12) ಆರೋಪಿ ದರ್ಶನ್ ಹಾಗೂ ಪವಿತ್ರಾ ಸೇರಿ ಎಲ್ಲಾ ಆರೋಪಿಗಳನ್ನು ಕರೆದುಕೊಂಡು ಹೋಗಿ ಕೊಲೆ ನಡೆದ ಪಟ್ಟಣಗೆರೆ(Pattanagere)ಶೆಡ್‌ನಲ್ಲಿ ಸ್ಥಳ ಮಹಜರು ನಡೆಸಿದ್ದರು. ಬಳಿಕ ಅನ್ನಪೂರ್ಣೇಶ್ವರಿನಗರ ಠಾಣೆಗೆ ವಾಪಸ್ ಕರೆತಂದಿದ್ದಾರೆ. ಸ್ಥಳ ಮಹಜರು ಮುಗಿಸಿ ಬರುವಾಗ ನಟ ದರ್ಶನ್ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಈ ಹಿನ್ನಲೆ ಪೊಲೀಸರು ಜೀಪ್ ಹಿಂದೆ ಓಡುವ ಪರಿಸ್ಥಿತಿ ಎದುರಾಯಿತು. ಇನ್ನು ಮಧ್ಯಾಹ್ನವು ಅನ್ನಪೂರ್ಣೇಶ್ವರಿನಗರ ಠಾಣೆ ಮುಂದೆ ಆಗಮಿಸಿದ ಫ್ಯಾನ್ಸ್, ಡಿ ಬಾಸ್ ಗೆ ಜೈ ಎಂದು ಕೂಗಾಟ ನಡೆಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು, ಲಾಠಿ ಬಿಸಿ ಅಭಿಮಾನಿಗಳನ್ನ ಚದುರಿಸಿದ್ದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us