ಜನ-ಸಂಪರ್ಕ ಸಭೆಯಲ್ಲಿ ಕಲ್ಲಾಪುರ ಗ್ರಾಮಸ್ಥರು ಮತ್ತು ರೈತರು ಕುಮಾರಸ್ವಾಮಿಯವರಿಗೆ ತಮ್ಮ ಸಮಸ್ಯೆ ಹೇಳಿಕೊಂಡರು
ರೈತನ ಮಾತನ್ನು ಗಮನವಿಟ್ಟು ಕೇಳುವ ಕುಮಾರಣ್ಣ ಕಾನೂನನ್ನು ಅವರಿಗೆ ವಿವರಿಸುತ್ತಾರೆ. ಖಾತೆ ಮಾಡಿಕೊಡದಿರಲು ಅಧಿಕಾರಿಗಳು ನಿಮ್ಮ ಶತ್ರುಗಳಲ್ಲ, ಅದಕ್ಕೊಂದು ವಿಧಾನವಿರುತ್ತದೆ ಮತ್ತು ಸರ್ವೇ ಸಹ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿಗಳೇ ಎಲ್ಲವನ್ನು ಪರಿಶೀಲಿಸಿ ಜಮೀನಿನ ಖಾತೆ ಮಾಡಿಸಿಕೊಡುತ್ತಾರೆ ಅಂತ ಮಾಜಿ ಮುಖ್ಯಮಂತ್ರಿಗಳು ರೈತನಿಗೆ ಹೇಳುತ್ತಾರೆ.
ರೈತರು ಯಾವ ಭಾಗದವರೇ ಆಗಿರಲಿ, ಅವರು ಹಲವಾರು ಸಂಕಷ್ಟಗಳೊಂದಿಗೆ ಸುತ್ತುವರಿಯಲ್ಪಟ್ಟಿರುತ್ತಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಕಲ್ಲಾಪುರದ (Kallapura) ಈ ರೈತ ತನಗಾಗಿರುವ ಅನ್ಯಾಯವನ್ನು ಮಾಜಿ ಮುಖ್ಯಮಂತ್ರಿ ಮತ್ತು ಚನ್ನಪಟ್ಟಣ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಅಂಗವಾಗಿ ಕಲ್ಲಾಪುರ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಒಂದು ಜನ-ಸಂಪರ್ಕ ಸಭೆಯಲ್ಲಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು. ಕಲ್ಲಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನ ತಮ್ಮ ತಮ್ಮ ನೋವುಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಹೇಳಿಕೊಳ್ಳುತ್ತಿದ್ದಾಗ ಈ ರೈತ ತನ್ನ ಸಮಸ್ಯೆಯನ್ನು ಕುಮಾರ ಸ್ವಾಮಿಯವರ ಗಮನಕ್ಕೆ ತಂದಿದ್ದಾರೆ. ತನಗೆ ಸೇರಿದ ಹಿಡುವಳಿ ಜಮೀನನ್ನು ಗೋಮಾಳ (Gomala) ಅಂತ ಪರಿಗಣಿಸುತ್ತಿದ್ದಾರೆ, ಕಂದಾಯ ಇಲಾಖೆಯುವರು ಖಾತೆ ಮಾಡಿಕೊಡುತ್ತಿಲ್ಲ ಎಂದು ಅವರು ದೂರುತ್ತಿದ್ದಾರೆ.
ಅವರು ಮಾತನ್ನು ಗಮನವಿಟ್ಟು ಕೇಳುವ ಕುಮಾರಣ್ಣ ಕಾನೂನನ್ನು ಅವರಿಗೆ ವಿವರಿಸುತ್ತಾರೆ. ಖಾತೆ ಮಾಡಿಕೊಡದಿರಲು ಅಧಿಕಾರಿಗಳು ನಿಮ್ಮ ಶತ್ರುಗಳಲ್ಲ, ಅದಕ್ಕೊಂದು ವಿಧಾನವಿರುತ್ತದೆ ಮತ್ತು ಸರ್ವೇ ಸಹ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿಗಳೇ ಎಲ್ಲವನ್ನು ಪರಿಶೀಲಿಸಿ ಜಮೀನಿನ ಖಾತೆ ಮಾಡಿಸಿಕೊಡುತ್ತಾರೆ ಅಂತ ಮಾಜಿ ಮುಖ್ಯಮಂತ್ರಿಗಳು ರೈತನಿಗೆ ಹೇಳಿದಾಗ ಅವರ ಪಕ್ಕದಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿಗಳು ತಾನು ಮಾಡಿಸಿಕೊಡುವುದಾಗಿ ಕೈ ಮೇಲಕ್ಕೆತ್ತಿ ಭರವಸೆ ನೀಡುತ್ತಾರೆ.
ಸದರಿ ಜಮೀನು ತನ್ನ ಪಿತ್ರಾರ್ಜಿತ ಆಸ್ತಿಯೆಂದು ಹೇಳುವ ರೈತ ಒಂದು ಪಕ್ಷ ಸರ್ವೇ ಮಾಡಿದ ನಂತರ ತನ್ನ ಜಮೀನು ಗೋಮಾಳಕ್ಕೆ ಸೇರಿದ್ದು ಅಂತೇನಾದರೂ ಅಧಿಕಾರಿಗಳು ಹೇಳಿದರೆ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತೇನೆ ಎಂದು ಹೇಳುತ್ತಾರೆ.
ಸಭೆಯಲ್ಲಿ ಸುಮಾರು ರೈತರು ಮತ್ತು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು ಮತ್ತು ಕುಮಾರಣ್ಣ ಅವುಗಳ ಕಡೆ ಗಮನಹರಿಸುವಂತೆ ಅಧಿಕಾರರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Venkatesh Iyer: ವೆಂಕಟೇಶ್ ಅಯ್ಯರ್ ಸ್ಫೋಟಕ ಹೊಡೆತಕ್ಕೆ ತಬ್ಬಿಬ್ಬಾದ ಭಾರತದ ಡಗೌಟ್: ಇಲ್ಲಿದೆ ರೋಚಕ ವಿಡಿಯೋ