ಮಾಗಡಿ ಬಳಿಯ ಮರೂರಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಬೇಡವೆಂದು ರೈತರು ಸಚಿವ ಅಶ್ವಥ್ ನಾರಾಯಣರ ಕಾಲಿಗೆರಗಿದರು
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ ಸಿ ಎನ್ ಅಶ್ವಥ್ ನಾರಾಯಣ ಅವರು ಸೋಮವಾರ ಸ್ಥಳ ಪರಿಶೀಲನೆಗೆ ಬಂದಾಗ ರೈತರು ಯಾವ ಕಾರಣಕ್ಕೂ ಕೈಗಾರಿಕಾ ಪ್ರದೇಶ ಮಾಡುವುದು ಬೇಡ ಅಂತ ಅಂಗಲಾಚುತ್ತಾ ಅವರ ಕಾಲಿಗೂ ನಮಸ್ಕರಿಸಿದರು.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮರೂರು (Maruru) ಬಳಿ ಕರ್ನಾಟಕ ಸರ್ಕಾರ ಕೈಗಾರಿಕಾ ಪ್ರದೇಶ (Industrial Area) ಸ್ಥಾಪಿಸಿ ಉದ್ದಿಮೆಗಳನ್ನು ಆರಂಭಿಸುವ ಯೋಜನೆ ಮಾಡಿಕೊಂಡಿದೆ, ಆದರೆ ಸರ್ಕಾರ ಆರಿಸಿಕೊಂಡಿರುವ ಭೂಮಿ ಫಲವತ್ತಾದ ಪ್ರದೇಶವಾಗಿದ್ದು ಅಲ್ಲಿ ಉಳುಮೆ ಮಾಡುತ್ತಿರುವ ಸರ್ಕಾರದ ಯೋಜನೆಯಿಂದ ಆಘಾತಕ್ಕೊಳಗಾಗಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಸೋಮವಾರ ಸ್ಥಳ ಪರಿಶೀಲನೆಗೆ ಬಂದಾಗ ರೈತರು ಯಾವ ಕಾರಣಕ್ಕೂ ಕೈಗಾರಿಕಾ ಪ್ರದೇಶ ಮಾಡುವುದು ಬೇಡ ಅಂತ ಅಂಗಲಾಚುತ್ತಾ ಅವರ ಕಾಲಿಗೂ ನಮಸ್ಕರಿಸಿದರು.
Latest Videos