ಮಗಳನ್ನು ಖುಷಿಯಾಗಿಡೋದು ನನ್ನ ಕರ್ತವ್ಯ, ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳೊಂದಿಗೆ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶ
ಮಗಳನ್ನು ಖುಷಿಯಾಗಿಡುವುದಕ್ಕಿಂತ ದೊಡ್ಡ ಕರ್ತವ್ಯ ಮತ್ತೊಂದಿಲ್ಲ ಎಂದು ಹೇಳುತ್ತಾ ವಿಚ್ಛೇದನ ಪಡೆದು ಮನೆಗೆ ಬಂದ ಮಗಳನ್ನು ನಿವೃತ್ತ ನ್ಯಾಯಾಧೀಶರೊಬ್ಬರು ವಾದ್ಯಗಳೊಂದಿಗೆ ಸ್ವಾಗತಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ತಂದೆ ಮಗಳು ಮನೆಗೆ ಬಂದಿದ್ದನ್ನು ಕಳಂಕ ಎಂದು ಪರಿಗಣಿಸಿಲ್ಲ. ಬದಲಾಗಿ ಆಕೆಯ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ಮೀರತ್ ಕೌಟುಂಬಿಕ ನ್ಯಾಯಾಲಯದ ಹೊರಗೆ, ಸಂಬಂಧಿಕರು ನೃತ್ಯ ಮಾಡಿ ಸಿಹಿತಿಂಡಿಗಳನ್ನು ವಿತರಿಸಿ ಡೋಲು ಬಾರಿಸುತ್ತಾ ಮನೆಗೆ ಕರೆದೊಯ್ಯಲಾಯಿತು.
ಮೀರತ್, ಏಪ್ರಿಲ್ 06: ಮಗಳನ್ನು ಖುಷಿಯಾಗಿಡುವುದಕ್ಕಿಂತ ದೊಡ್ಡ ಕರ್ತವ್ಯ ಮತ್ತೊಂದಿಲ್ಲ ಎಂದು ಹೇಳುತ್ತಾ ವಿಚ್ಛೇದನ ಪಡೆದು ಮನೆಗೆ ಬಂದ ಮಗಳನ್ನು ನಿವೃತ್ತ ನ್ಯಾಯಾಧೀಶರೊಬ್ಬರು ವಾದ್ಯಗಳೊಂದಿಗೆ ಸ್ವಾಗತಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ತಂದೆ ಮಗಳು ಮನೆಗೆ ಬಂದಿದ್ದನ್ನು ಕಳಂಕ ಎಂದು ಪರಿಗಣಿಸಿಲ್ಲ. ಬದಲಾಗಿ ಆಕೆಯ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.
ಮೀರತ್ ಕೌಟುಂಬಿಕ ನ್ಯಾಯಾಲಯದ ಹೊರಗೆ, ಸಂಬಂಧಿಕರು ನೃತ್ಯ ಮಾಡಿ ಸಿಹಿತಿಂಡಿಗಳನ್ನು ವಿತರಿಸಿ ಡೋಲು ಬಾರಿಸುತ್ತಾ ಮನೆಗೆ ಕರೆದೊಯ್ಯಲಾಯಿತು.ಐ ಲವ್ ಮೈ ಡಾಟರ್ ಎನ್ನುವ ಚಿತ್ರವನ್ನು ಕಪ್ಪು ಟಿ ಶರ್ಟ್ನಲ್ಲಿ ಮುದ್ರಿಸಲಾಗಿತ್ತು. ಏಪ್ರಿಲ್ 4 ರಂದು ನ್ಯಾಯಾಲಯವು ಅಧಿಕೃತವಾಗಿ ವಿಚ್ಛೇದನವನ್ನು ನೀಡಿದ ನಂತರ ಅವರು ಮನೆಗೆ ಹಿಂದಿರುಗಿದಾಗ ಅವರ ತಂದೆ ಆಕೆಯನ್ನು ಸಂತಸದಿಂದ ಬರಮಾಡಿಕೊಂಡರು.
ಪ್ರಣೀತಾ ಡಿಸೆಂಬರ್ 2018 ರಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾಗಿದ್ದರು. ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಕಿರುಕುಳವನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಮಗ ಹುಟ್ಟಿದ ಮೇಲೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅಂತಿಮವಾಗಿ ಗಂಡನನ್ನು ಬಿಡುವ ನಿರ್ಧಾರ ಮಾಡಿದ್ದರು. ಅದಕ್ಕೆ ತವರು ಮನೆಯಿಂದ ಬೆಂಬಲವೂ ಸಿಕ್ಕಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 06, 2026 11:07 AM
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು

