ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ಬೆಚ್ಚಿಬಿದ್ದ ಜನರಿಗೆ ಕೊನೆಗೂ ಸಿಕ್ಕಿತು ಅಸಲಿ ಉತ್ತರ: ವಿಡಿಯೋ ನೋಡಿ

Edited By:

Updated on: Mar 26, 2026 | 7:18 AM

ಹುಬ್ಬಳ್ಳಿ ನಗರದಲ್ಲಿ ಬುಧವಾರ ಸಂಜೆ ಏಕಾಏಕಿ ಕಾಣಿಸಿಕೊಂಡ ಮೂರು ಯುದ್ಧ ವಿಮಾನಗಳ ಅಬ್ಬರ ಜನರಲ್ಲಿ ಭೀತಿ ಹುಟ್ಟಿಸಿತ್ತು. ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ ಈ ವಿಮಾನಗಳನ್ನು ಕಂಡು ಆತಂಕಗೊಂಡಿದ್ದ ಸಾರ್ವಜನಿಕರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ತರಬೇತಿ ಹಾರಾಟವೇ ಅಥವಾ ಬೇರೇನಾದರೂ ಇದೆಯೇ? ಕಂಪ್ಲೀಟ್ ಡಿಟೇಲ್ಸ್, ವಿಡಿಯೋ ಇಲ್ಲಿದೆ.

ಹುಬ್ಬಳ್ಳಿ, ಮಾರ್ಚ್​ 26: ಹುಬ್ಬಳ್ಳಿ ನಗರದಲ್ಲಿ ಬುಧವಾರ ಅಚಾನಕ್ಕಾಗಿ ಕಾಣಿಸಿಕೊಂಡ ಮೂರು ಯುದ್ಧ ವಿಮಾನಗಳು ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಸಿದವು. ಮಾರ್ಚ್ 25 ರ ಸಂಜೆ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ ಈ ವಿಮಾನಗಳನ್ನು ನೋಡಿದ ಜನರು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಗಾಬರಿಗೊಂಡರು. ಕೆಲ ಹೊತ್ತು ಹುಬ್ಬಳ್ಳಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರೂ, ನಂತರ ಇದು ಕೇವಲ ಪ್ರಾಯೋಗಿಕ ಹಾರಾಟ (training sortie) ಎಂಬುದು ಸ್ಪಷ್ಟವಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಅವರು ನೀಡಿದ ಮಾಹಿತಿಯಂತೆ, ಈ ಮೂರು ಯುದ್ಧ ವಿಮಾನಗಳು ಗೋವಾ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗಿ, ನಿಯಮಿತವಾಗಿ ನಡೆಯುವ ತರಬೇತಿ ಹಾರಾಟದ ಭಾಗವಾಗಿ ಹುಬ್ಬಳ್ಳಿ ಆಕಾಶದಲ್ಲಿ ಸಂಚರಿಸಿದ್ದವು. ಇಂತಹ ಪ್ರಾಯೋಗಿಕ ಹಾರಾಟಗಳು ಸಾಮಾನ್ಯವಾಗಿ ಎರಡು ತಿಂಗಳಿಗೆ ಒಮ್ಮೆ ನಡೆಯುತ್ತವೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More