ಅಕ್ಷಯ್ ಕುಮಾರ್ ಬೆಲ್ಬಾಟಮ್ ಚಿತ್ರದ ಮರ್ಜಾವಾನ್ ಹಾಡಿನ ಪೋಸ್ಟರ್ ಒರಿಜಿನಲ್ ಅಲ್ಲವೆಂದರು ಚಿತ್ರಪ್ರೇಮಿಗಳು!
ಹಾಗೆ ನೋಡಿದರೆ, ಈಗಿನ ಚಿತ್ರಗಳಲ್ಲಿ-ಬಾಲಿವುಡ್ ಇಲ್ಲವೇ ಹಾಲಿವುಡ್ ಅಥವಾ ಮತ್ಯಾವುದೇ ವುಡ್ ಆಗಿರಲಿ, ಬಹಳಷ್ಟು ಸನ್ನಿವೇಶಗಳು, ಪೋಸ್ಟರ್ಗಳು, ಹಾಡುಗಳು, ಚಿತ್ರಕಥೆಗಳು ಮೊದಲ ಅಂದರೆ ಹಳೆಯ ಸಿನಿಮಾಗಳಿಂದ ಪ್ರಭಾವಿತವಾಗಿರುವಂಥವೇ.
ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಹೊಸ ‘ಬೆಲ್ಬಾಟಮ್’ ಚಿತ್ರದ ಮರ್ಜಾವಾ ಹಾಡಿನ ಪೋಸ್ಟರ್ಗೆ ಸಂಬಂಧಿಸಿದಂತೆ ಅವರು ಸುದ್ದಿಯಲ್ಲಿದ್ದಾರೆ ಮತ್ತು ಸದರಿ ಪೋಸ್ಟರ್ ವಿವಾದವನ್ನೂ ಸೃಷ್ಟಿಸಿದೆ. ಶುಕ್ರವಾರ ಬಿಡುಗಡೆಯಾಗಿರುವ ಅಕ್ಷಯ್ ಕುಮಾರ್ ಮತ್ತು ಚಿತ್ರದ ನಾಯಕಿ ವಾಣಿ ಕಪೂರ್ ಚಲಿಸುತ್ತಿರುವ ರೈಲಿನ ಬಾಗಿಲು ಹೊರಗೆ ಜೊತಾಡುತ್ತಾ ರೋಮಾನ್ಸ್ ಮಾಡುತ್ತಿರುವ ಪೋಸ್ಟರ್ ಬೇರೆಯೊಂದು ಪೋಸ್ಟರ್ನಿಂದ ಪ್ರೇರಿತವಾದದ್ದು, ಅದು ಚಿತ್ರ ನಿರ್ದೇಶಕನ ಒರಿಜಿನಲ್ ಕಲ್ಪನೆ ಅಲ್ಲವೆಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ಗಳನ್ನೂ ಕದಿಯುವ ದುಸ್ಥಿತಿ ಬಾಲಿವುಡ್ಗೆ ಎದುರಾಗಿರುವುದು ಶೋಚನೀಯ ಎಂದು ಜರಿಯಲಾಗುತ್ತಿದೆ.
ಸೋಶಿಯಲ್ ಮೀಡಿಯ ಇನ್ಫ್ಲುಯೆನ್ಸರ್ ಮತ್ತು ಡಿಜಿಟಲ್ ಕ್ರಿಯೇಟರ್ ಕೆಮಿಲ್ಲೀ ಅವರು ಇಂಥದ್ದೇ ಒಂದು ಚಿತ್ತವನ್ನು ಶೇರ್ ಮಾಡಿದ್ದರು. ಪ್ರಪಂಚ ಸುತ್ತುವ ಹವ್ಯಾಸದ ಕೆಮಿಲ್ಲೀ ಸುಂದರ ಮತ್ತು ರಮಣೀಯವೆನಿಸುವ ದೃಶ್ಯಗಳ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಮರ್ಜಾವಾನ್ ಪೋಸ್ಟರ್ ಟೀನಾ ಮತ್ತು ಸೆಡಿರಿಕ್ (ournextlocation) ಹಾಗೂ ರಾಕ್ವೆಲ್ ಹಾಗೂ ಮಿಗ್ವಲ್ ಅವರ (explorerssaurua) ಪೋಸ್ಟರ್ಗಳೊಂದಿಗೂ ಹೋಲಿಕೆ ಹೊಂದಿದೆ.
ಹಾಗೆ ನೋಡಿದರೆ, ಈಗಿನ ಚಿತ್ರಗಳಲ್ಲಿ-ಬಾಲಿವುಡ್ ಇಲ್ಲವೇ ಹಾಲಿವುಡ್ ಅಥವಾ ಮತ್ಯಾವುದೇ ವುಡ್ ಆಗಿರಲಿ, ಬಹಳಷ್ಟು ಸನ್ನಿವೇಶಗಳು, ಪೋಸ್ಟರ್ಗಳು, ಹಾಡುಗಳು, ಚಿತ್ರಕಥೆಗಳು ಮೊದಲ ಅಂದರೆ ಹಳೆಯ ಸಿನಿಮಾಗಳಿಂದ ಪ್ರಭಾವಿತವಾಗಿರುವಂಥವೇ. ಒರಿಜನಲ್ ಕಲ್ಪನೆಗಳು, ಹಾಡುಗಳು ಈಗ ಬತ್ತಿಹೋಗಿವೆ. ಅಕ್ಷಯ್ ಅಥವಾ ಅವರ ಸಿನಿಮಾ ತಂಡವನ್ನು ಮಾತ್ರವಲ್ಲ ಉಳಿದವರನ್ನೂ ದೂಷಿಸಬೇಕಿದೆ.
ಇದನ್ನೂ ಓದಿ: Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ