Leelavathi No More: ಸಕಲ ಸರ್ಕಾರೀ ಗೌರವ ಮತ್ತು ಬಂಟ ಸಂಪ್ರದಾಯದಂತೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ

|

Updated on: Dec 09, 2023 | 6:33 PM

Leelavathi No More: ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಪೊಲೀಸ್ ವಾದ್ಯವೃಂದದ ಮೂಲಕ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು. ಸರ್ಕಾರದ ಪರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ ಲೀಲಮ್ಮಗೆ ಅಂತಿಮ ಗೌರವ ಸಲ್ಲಿಸಿದರು.

ನೆಲಮಂಗಲ: ಹೆಚ್ಚು ಕಡಿಮೆ 9 ದಶಕಗಳ ಕಾಲ ಸಿನಿಪ್ರಿಯರ ಅಭಿಮಾನ ದೇವತೆಯಾಗಿ, ಮಗನ ಅಕ್ಕರೆಯ ಅಮ್ಮನಾಗಿ, ತನ್ನ ಮನೆ ಮತ್ತು ತೋಟದಲ್ಲಿ ಕೆಲಸ ಮಾಡುತ್ತಿದ್ದ ಜನರಿಗೆ ಪ್ರೀತಿಯ ಯಜಮಾನಿಯಾಗಿ ಮತ್ತು ಪರೋಪಕಾರಿಯಾಗಿ ಸಾರ್ಥಕ ಬದುಕು ನಡೆಸಿದ ಕನ್ನಡನಾಡಿನ ಲೀಲಮ್ಮ (Leelavathi) ಮಣ್ಣಲ್ಲಿ ಲೀನವಾದರು. ಸೊಲದೇವನಹಳ್ಳಿಯಲ್ಲಿರುವ ಅವರ ತೋಟದಲ್ಲಿ ಹಿಂದೂ ಧರ್ಮ ಮತ್ತು ಬಂಟ ಸಮುದಾಯದ ಸಂಪ್ರದಾಯದ (Bant community rituals) ಹಾಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸರ್ಕಾರೀ ಗೌರವದೊಂದಿಗೆ ಅವರಿಗೆ ಅಂತಿಮ ವಿದಾಯ ಹೇಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ (police gun salute) ಪೊಲೀಸ್ ವಾದ್ಯವೃಂದದ ಮೂಲಕ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು. ಸರ್ಕಾರದ ಪರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ ಲೀಲಮ್ಮಗೆ ಅಂತಿಮ ಗೌರವ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ ಶಿವಶಂಕರ್ ಎನ್ ಈ ಸಂದರ್ಭದಲ್ಲಿ ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on