ಕಾರಿನ ಟಾಪ್ ಮೇಲೆ ಕುಳಿತು ಹುಚ್ಚಾಟ: ಸ್ವಲ್ಪ ಹೆಚ್ಚು ಕಡಿಮೆ ಆದ್ರು ಯಮನಪಾದ
ದಕ್ಷಿಣ ಕನ್ನಡದಲ್ಲಿ ಕಾರಿನ ಟಾಪ್ ಮೇಲೆ ಕುಳಿತು ಯುವಕರು ಹುಚ್ಚಾಟ ಮೆರೆದಿದ್ದಾರೆ. ಸುಳ್ಯ ತಾಲೂಕಿ ಸಂಪಾಜಿ-ಸುಳ್ಯ ರಸ್ತೆಯಲ್ಲಿ, ಕಾರಿನಲ್ಲಿ 7 ಜನ ಪ್ರಯಾಣಿಸಿದ್ದಾರೆ. ಕಾರು ವೇಗವಾಗಿ ಚಲಿಸುತ್ತಿರುವಾಗಲೇ ಯುವಕರು ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ರಸ್ತೆಯಲ್ಲೇ ಅಟ್ಟಹಾಸ ಮೆರೆದಿದ್ದಾರೆ.
ಮಂಗಳೂರು, (ಏಪ್ರಿಲ್ 06): ದಕ್ಷಿಣ ಕನ್ನಡದಲ್ಲಿ(Dakhsina Kannada) ಕಾರಿನ ಟಾಪ್ ಮೇಲೆ ಕುಳಿತು ಯುವಕರು(Y0uths) ಹುಚ್ಚಾಟ ಮೆರೆದಿದ್ದಾರೆ. ಸುಳ್ಯ ತಾಲೂಕಿ ಸಂಪಾಜಿ-ಸುಳ್ಯ ರಸ್ತೆಯಲ್ಲಿ, ಕಾರಿನಲ್ಲಿ(Car) 7 ಜನ ಪ್ರಯಾಣಿಸಿದ್ದಾರೆ. ಕಾರು ವೇಗವಾಗಿ ಚಲಿಸುತ್ತಿರುವಾಗಲೇ ಯುವಕರು ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ರಸ್ತೆಯಲ್ಲೇ ಅಟ್ಟಹಾಸ ಮೆರೆದಿದ್ದಾರೆ.
KA09 MG5880 ನಂಬರಿನ ಕ್ರೆಟಾ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣ ಮಾಡಿದ್ದು, ಕಾರು ಅತೀ ವೇಗವಾಗಿ ಹೋಗುತ್ತಿರುವಾಗಲೇ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ಪುಂಡಾಟ ಮಾಡಿದ್ದು, ಇದನ್ನು ಮತ್ತೊಂದು ವಾಹನ ಸವಾರರು ವಿಡಿಯೋ ಮಾಡಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಮೈ ಜುಮ್ ಎನ್ನಿಸಿತ್ತು. ಸ್ವಲ್ಪ ಹೆಚ್ವು ಕಡಿಮೆ ಆದ್ರೂ ಯಮನಪಾದ ಗ್ಯಾರಂಟಿ. ಈ ಸಂಬಂಧ ಸುಳ್ಯ ಪೊಲೀಸರು, BNS ಆಕ್ಟ್ 281 IMV,184 ಸಕ್ಷನ್ ಅಡಿಯಲ್ಲಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕರ ಪತ್ತೆಗೆ ಕಾರ್ಯಚರಣೆ ನಡೆಸಿದ್ದಾರೆ. ಆದ್ರೆ, ಎಫ್ಐಆರ್ ದಾಖಲಾಗುತ್ತಿದ್ದಂತೆಯೆ ಯುವಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.