ಕಾಡ್ಗಿಚ್ಚಿನಿಂದ ನಾಶವಾಯ್ತು ಉತ್ತರಾಖಂಡದ ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು

Updated on: Jan 15, 2026 | 10:27 PM

ಉತ್ತರಾಖಂಡದ ಚಮೋಲಿ ಆಡಳಿತವು ಹೈ ಅಲರ್ಟ್‌ನಲ್ಲಿದೆ. ನಂದಾ ದೇವಿ ಕಾಡಿನ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಚಳಿಗಾಲದ ಹಿಮಪಾತದ ಕೊರತೆ ಮತ್ತು ಮಳೆಯ ಕೊರತೆಯೇ ಈ ರೀತಿಯ ಬೆಂಕಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಅತಿ ಎತ್ತರದ ಪ್ರದೇಶವಾದ್ದರಿಂದ ಇಲ್ಲಿನ ಬೆಂಕಿ ನಂದಿಸಲು ಅತ್ಯಂತ ಕಷ್ಟವಾಗುತ್ತಿದೆ.

ಉತ್ತರಾಖಂಡ, ಜನವರಿ 15: ಉತ್ತರಾಖಂಡದ ನಂದಾ ದೇವಿ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸತತ 5ನೇ ದಿನವೂ ಬೆಂಕಿ (Fire Accident) ಹೊತ್ತಿ ಉರಿಯುತ್ತಿದೆ. ಅತ್ಯಮೂಲ್ಯವಾದ ಸಸ್ಯ ಸಂಪತ್ತು, ಔಷಧೀಯ ಸಸ್ಯಗಳು ಸುಟ್ಟು ಬೂದಿಯಾಗಿದೆ. ಇಂದು ಇಲ್ಲಿನ ಪರಿಸ್ಥಿತಿಯನ್ನು ನಿರ್ಣಯಿಸಲು ವೈಮಾನಿಕ ಸಮೀಕ್ಷೆಯನ್ನು ನಡೆಸಲಾಯಿತು. ಈ ಕಣಿವೆಯು ಅಪರೂಪದ ಹೂವುಗಳಿಗೆ ಹೆಸರುವಾಸಿಯಾಗಿದೆ. ಲಕ್ಷ್ಮಣ ಗಂಗಾ ಮತ್ತು ಅಲಕನಂದಾ ನದಿಗಳ ನಡುವೆ ಇರುವ, 3500-4200 ಮೀಟರ್ ಎತ್ತರದಲ್ಲಿರುವ UNESCO ವಿಶ್ವ ಪರಂಪರೆಯ ತಾಣ ಇದಾಗಿದೆ.

ಚಳಿಗಾಲದ ಹಿಮಪಾತದ ಕೊರತೆ ಮತ್ತು ಮಳೆಯ ಕೊರತೆಯೇ ಈ ರೀತಿಯ ಬೆಂಕಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಅತಿ ಎತ್ತರದ ಪ್ರದೇಶವಾದ್ದರಿಂದ ಇಲ್ಲಿನ ಬೆಂಕಿ ನಂದಿಸಲು ಅತ್ಯಂತ ಕಷ್ಟವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 15, 2026 10:25 PM