ಮುತ್ತತ್ತಿ ಕಾವೇರಿ ನದಿಯಲ್ಲಿ ಐವರು ಜಲಸಮಾಧಿ: ಕೊನೇ ಕ್ಷಣದ ವಿಡಿಯೋ ವೈರಲ್
Mandya News: ಮಂಡ್ಯದ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಜಲಕ್ರೀಡೆಗೆ ಇಳಿದಿದ್ದ ನಾಲ್ವರು ಮಹಿಳೆಯರು ಮತ್ತು ಅವರನ್ನು ರಕ್ಷಿಸಲು ಯತ್ನಿಸಿದ ಚಾಲಕ ಸೇರಿ ಐವರು ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ. ಸಾವಿಗೂ ಮುನ್ನ ಖುಷಿಯಿಂದ ನೀರಿಗೆ ಇಳಿದಿದ್ದ ದೃಶ್ಯಗಳು ವೈರಲ್ ಆಗಿದ್ದು, ಜಿಲ್ಲಾಧಿಕಾರಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಮುಖ್ಯಾಂಶಗಳು
- ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಐವರು ಜಲ ಸಮಾಧಿ
- ದುರಂತ ಅಂತ್ಯ ಕಂಡ ಸಂತಸದಿಂದ ನೀರಿಗೆ ಇಳಿದಿದ್ದವರು
- ಕೊನೇ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮಂಡ್ಯ, ಜೂನ್ 25: ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಜಲಕ್ರೀಡೆಗೆ ಇಳಿದಿದ್ದ ನಾಲ್ವರು ಮಹಿಳೆಯರು ಮತ್ತು ಅವರನ್ನು ರಕ್ಷಿಸಲು ಯತ್ನಿಸಿದ ಕಾರು ಚಾಲಕ ಸೇರಿದಂತೆ ಐವರು ಜಲಸಮಾಧಿಯಾಗಿರುವ ಘಟನೆ ನಿನ್ನೆ ನಡೆದಿತ್ತು. ಸಾವಿಗೂ ಮುನ್ನ ಸಂತಸದಿಂದ ನೀರಿಗೆ ಇಳಿದಿದ್ದವರ ಕೊನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇವಸ್ಥಾನಕ್ಕೆ ತೆರಳಿದ್ದ ನಾಲ್ವರು ಮಹಿಳೆಯರು ನೀರಿಗೆ ಇಳಿದಿದ್ದು, ಆರಂಭದಲ್ಲಿ ನೀರು ಮೊಣಕಾಲು ಮಟ್ಟಕ್ಕೆ ಮಾತ್ರ ಇತ್ತು. ನೀರಿನಲ್ಲಿ ಆಟವಾಡುವಾಗ ಅವರಲ್ಲಿ ಒಬ್ಬರು ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಉಳಿದ ಮೂವರು ಮಹಿಳೆಯರು ಮತ್ತು ನಂತರ ಕಾರು ಚಾಲಕ ಮಹೇಶ್ ಪ್ರಯತ್ನಿಸಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 25, 2026 02:14 PM
Follow Us
Latest Videos
