ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ; ಭಾಗಮಂಡಲ‌ ಭಗಂಡೇಶ್ವರನಿಗೆ ಜಲ‌ ದಿಗ್ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 18, 2024 | 2:52 PM

ಕೊಡಗು(Kodagu) ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಪ್ರಸಿದ್ದ ಭಾಗಮಂಡಲದ ಭಗಂಡೇಶ್ವರ ದೇಗುಲದ ಆವರಣಕ್ಕೆ ಕಾವೇರಿ ನೀರು ನುಗ್ಗಿದೆ. ಜೊತೆಗೆ ಮಡಿಕೇರಿ, ನಾಪೋಕ್ಲು ಮತ್ತು ಭಾಗಮಂಡಲ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ನೂತನ ಫ್ಲೈ ಓವರ್ ಬಳಕೆ ಮಾಡಲಾಗಿದೆ.

ಕೊಡಗು, ಜು.18: ಕರ್ನಾಟಕದ ಹಲವೆಡೆ ಮಳೆ(Rain)ಯ ಆರ್ಭಟ ಜೋರಾಗಿದ್ದು, ಕರಾವಳಿ ಜಿಲ್ಲೆಗಳಲ್ಲೊಂತು ಅನಾಹುತಗಳು ಸಂಭವಿಸಿದೆ. ಅದರಂತೆ ಕೊಡಗು(Kodagu) ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಪ್ರಸಿದ್ದ ಭಾಗಮಂಡಲದ ಭಗಂಡೇಶ್ವರ ದೇಗುಲದ ಆವರಣಕ್ಕೆ ಕಾವೇರಿ ನೀರು ನುಗ್ಗಿದೆ. ಜೊತೆಗೆ ಮಡಿಕೇರಿ, ನಾಪೋಕ್ಲು ಮತ್ತು ಭಾಗಮಂಡಲ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ನೂತನ ಫ್ಲೈ ಓವರ್ ಬಳಕೆ ಮಾಡಲಾಗಿದೆ. ಇತ್ತ ವಿರಾಜಪೇಟೆ ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಪಟ್ಟಣದ ಮಾರುಕಟ್ಟೆ ಪ್ರದೇಶದ ರಾಜಕಾಲುವೆ ಹಾಗೂ ವಿರಾಜಪೇಟೆ-ಸಿದ್ದಾಪುರ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ. ಇನ್ನು ಮಲೆತಿರಿಕೆ ಬೆಟ್ಟದಿಂದ ನೀರು ಹರಿದು ಬರುತ್ತಿರುವುದರಿಂದ ಬೆಟ್ಟದ ತಪ್ಪಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on