Karnataka Assembly Polls: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೋಡ್ ಶೋಗೆ ಬಿಗಿ ಪೊಲೀಸ್ ಬಂದೋಬಸ್ತ್, ಹಲವು ರಸ್ತೆಗಳು ಬ್ಲಾಕ್
5 ಡಿಸಿಪಿ, 20 ಎಸಿಪಿ, 64 ಇನ್ಸ್ ಪೆಕ್ಟರ್, 180 ಮಹಿಳಾ ಪಿಎಸ್ ಐ ಮತ್ತು 10 ಕೆಎಸ್ ಆರ್ ಪಿ ತುಕುಡಿ ಸೇರಿದಂತೆ ಒಟ್ಟು 3 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದಿನಿಂದ ಸುಮಾರು ಹತ್ತು ದಿನಗಳ ಕಾಲ ಕರ್ನಾಟಕದ ನಾನಾ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅವರು ಈಗಾಗಲೇ ಬೀದರ್ ಗೆ ಆಗಮಿಸಿದ್ದು ಮಧ್ಯಾಹ್ನದ ನಂತರ ಬೆಂಗಳೂರಲ್ಲಿ ಬಂದಿಳಿಯಲಿದ್ದಾರೆ. ನಗರದಲ್ಲಿ ಪ್ರಧಾನಿಯವರು ಸಂಜೆ ನೈಸ್ ರೋಡ್ ಜಂಕ್ಷನ್ ನಿಂದ (NICE road junction) ಸುಮನಹಳ್ಳಿ ಜಂಕ್ಷನ್ ವರೆಗೆ ರೋಡ್ ಶೋ ನಡೆಸಲಿರುವುದರಿಂದ ಆ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ (police security) ಈಗಿಂದಲೇ ನಿಯೋಜಿಸಲಾಗಿದೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ವಾಕ್ ಥ್ರೂನಲ್ಲಿ ಹೇಳುವ ಹಾಗೆ 5 ಡಿಸಿಪಿ, 20 ಎಸಿಪಿ, 64 ಇನ್ಸ್ ಪೆಕ್ಟರ್, 180 ಮಹಿಳಾ ಪಿಎಸ್ ಐ ಮತ್ತು 10 ಕೆಎಸ್ ಆರ್ ಪಿ ತುಕುಡಿ ಸೇರಿದಂತೆ ಒಟ್ಟು 3 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ