ಬಿಜೆಪಿ ಎಮ್ಮೆಲ್ಸಿ ಲಖನ್ ಜಾರಕಿಹೊಳಿಯ ಗೋಕಾಕ್ ಮನೇಲಿ ಸಭೆ ಸೇರಿದ ಬಿಜೆಪಿ ಭಿನ್ನರು

Updated on: Jul 07, 2025 | 6:37 PM

ಜಾರಕಿಹೊಳಿ ಕುಟುಂಬದ ಎಲ್ಲ ಐವರು ಸಹೋದರರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಯಮಕನಮರಡಿ ಕ್ಷೇತ್ರದ ಶಾಸಕ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವ ಸತೀಶ್ ಅವರನ್ನು ಬಿಟ್ಟರೆ ಉಳಿದ ನಾಲ್ವರು-ರಮೇಶ್, ಬಾಲಚಂದ್ರ, ಭೀಮಶಿ ಮತ್ತು ಲಖನ್ ಬಿಜೆಪಿ ನಾಯಕರು. ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಿಗೆ ಸೇರುವುದು ಸಹೋದರರ ವೈಶಿಷ್ಟ್ಯತೆ.

ಬೆಳಗಾವಿ, ಜುಲೈ 7: ಸಾಮಾನ್ಯವಾಗಿ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಸೇರುತ್ತಿದ್ದ ರೆಬೆಲ್ ಬಿಜೆಪಿ ನಾಯಕರು ಫಾರ್ ಎ ಚೇಂಜ್ ಇವತ್ತು ಬೆಳಗಾವಿ ಜಿಲ್ಲೆ ಗೋಕಾಕ ಪಟ್ಟಣದಲ್ಲಿರುವ ಪಕ್ಷದ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (Lakhan Jarkiholi) ಮನೆಯಲ್ಲಿ ಸೇರಿದ್ದರು. ಲಖನ್ ಸಹೋದರ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಬಿವಿ ನಾಯಕ್, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ ಮೊದಲಾದವರು ಮಾತಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಲಖನ್ ಇದಕ್ಕೂ ಮೊದಲು ರೆಬೆಲ್ ಗಳ ಗುಂಪಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರೂ ಬಿಜೆಪಿಯಲ್ಲಿ ಅಸಮಾಧಾನಿತ ನಾಯಕ ಅಂತ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ.

ಇದನ್ನೂ ಓದಿ:  ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ