ಗೆಸ್ಟ್ ರೂಮ್ನಲ್ಲಿ ವಿದೇಶಿ ಯುವತಿಯರು, ಮದ್ಯ ರಾಶಿ! ಮಂಗಳೂರು ನಟೋರಿಯಸ್ ವಂಚಕನ ರಹಸ್ಯ ಕೋಣೆ ಹೇಗಿತ್ತು ನೋಡಿ
200 ಕೋಟಿ ರೂ. ವಂಚಿಸಿದ ಕೇಸ್ನಲ್ಲಿ ಮಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿರುವ ನಟೋರಿಯಸ್ ವಂಚಕ ರೋಹನ್ ಸಲ್ಡಾನಾ ಐಷಾರಾಮಿ ಬಂಗಲೆ ಹೇಗಿದೆ? ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಯಲ್ಲಿ ಏನೇನಿದೆ? ವಿದೇಶಿ ಯುವತಿಯರ ಜತೆ ಆತನ ಐಷಾರಾಮಿ ಬದುಕು ಹೇಗಿತ್ತು? ಎಲ್ಲ ವಿವರಗಳುಳ್ಳ ವಿಡಿಯೋ ಇಲ್ಲಿದೆ.
ಮಂಗಳೂರು, ಜುಲೈ 18: ದೇಶದ ಐಷಾರಾಮಿ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಸುಮಾರು 200 ಕೋಟಿ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಮಂಗಳೂರಿನ ರೋಹನ್ ಸಲ್ಡಾನಾ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇದರ ಬೆನ್ನಲ್ಲೇ ಆತ ವಾಸವಿದ್ದ ಮಂಗಳೂರಿನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಯ ರಹಸ್ಯಗಳು ಹೊರಬಿದ್ದಿವೆ. ಆತ ಈ ಬಂಗಲೆಗೆ ಅನೇಕ ವಿದೇಶಿ ಯವತಿರಯನ್ನು ಕರೆಸಿಕೊಂಡು ಪಾರ್ಟಿ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಗೆಸ್ಟ್ ರೂಮ್ನಲ್ಲಿ ವಿದೇಶಿ ಯುವತಿಯರನ್ನು ಇರಿಸಿಕೊಳ್ಳುತ್ತಿದ್ದ. ಇಡೀ ಕೋಣೆಯಲ್ಲಿ, ಫ್ರಿಡ್ಜ್ನಲ್ಲಿ ವಿದೇಶಿ ಮದ್ಯದ ಬಾಟಲ್ಗಳ ರಾಶಿಯೇ ಪತ್ತೆಯಾಗಿವೆ. ಅಲ್ಲದೆ, ಅಡಗಿಕೊಳ್ಳಲು ರಹಸ್ಯ ಕೋಣೆಯೊಂದೂ ಅಲ್ಲಿತ್ತು. ರೋಹನ್ ಸಲ್ಡಾನಾ ಐಷಾರಾಮಿ ಬಂಗಲೆ, ರಹಸ್ಯ ಕೋಣೆಯ ಇಂಚಿಂಚೂ ಮಾಹಿತಿ ವಿಡಿಯೋ ಸಹಿತ ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಸಾಲ ಕೊಡುವುದಾಗಿ ಕೋಟ್ಯಂತರ ರೂ ವಂಚನೆ: ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿರುವಾಗಲೇ ಬಂಧನ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ