ಈಶ್ವರಪ್ಪ ಹೇಳಿಕೆ ಸೃಷ್ಟಿಸಿರುವ ವಿವಾದದ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲಿಲ್ಲ
ಈಶ್ವರಪ್ಪ ಆಡಿರುವ ಮಾತು ಪಕ್ಷದ ಇಮೇಜಿಗೆ ಧಕ್ಕೆ ಉಂಟು ಮಾಡುತ್ತಿರುವುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಯಡಿಯೂರಪ್ಪನವರು, ಗುರುವಾರ ಮಾಧ್ಯಮದವರು ಸದರಿ ವಿವಾದದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಏನನ್ನೂ ಹೇಳದೆ ಸುಮ್ಮನೆ ನಡೆದುಹೋದರು.
ಅಧಿಕಾರದಲ್ಲಿರಲಿ ಇಲ್ಲದಿರಲಿ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರು (BS Yediyurappa) ಸಾರ್ವಜನಿಕವಾಗಿ (publicly) ತಮ್ಮ ಘನತೆಗೆ ತಕ್ಕಂತೆಯೇ ವರ್ತಿಸುತ್ತಾರೆ. ಬೇರೆ ನಾಯಕರಂತೆ ಸುಖಾಸುಮ್ಮನೆ ಹೇಳಿಕೆ ನೀಡುವುದು, ವಿವಾದ ಸೃಷ್ಟಿಸುವುದು ಅವರಿಂದಾಗದ ಮಾತು. ಅಗತ್ಯಕ್ಕೆ ತಕ್ಕಷ್ಟೇ ಮಾತನ್ನು ಮಾತ್ರ ಅವರಾಡೋದು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಕೆ ಎಸ್ ಈಶ್ವರಪ್ಪನವರು (KS Eshwarappa) ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಹೇಳಿ ವಿವಾದ ಸೃಷ್ಟಿಸುತ್ತಾರೆ. ಕಾಂಗ್ರೆಸ್ ಪಕ್ಷದವರು ಈಶ್ವರಪ್ಪ ರಾಷ್ಟ್ರದ್ವಜಕ್ಕೆ ಅಪಚಾರ ಮಾಡಿ ದೇಶದ್ರೋಹವೆಸಗಿದ್ದಾರೆ, ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು, ಜೈಲಿಗೆ ಹಾಕಬೇಕು ಅಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬಿಜೆಪಿ ಧುರೀಣರು ಈಶ್ವರಪ್ಪನವರನ್ನು ಸಮರ್ಥಿಸಿಕೊಳ್ಳುವ ಮತ್ತು ಬೆಂಬಲಿಸುವ ಭರದಲ್ಲಿ ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಖುದ್ದು ಈಶ್ವರಪ್ಪನವರೇ, ಕೇಸರಿ ಧ್ವಜ ಹಾರಿಸುವುದು ಈಗಲ್ಲ, 50-100 ವರ್ಷಗಳ ನಂತರ ಅಂತ ಹೇಳಿದ್ದಾರೆ. ಅಂದರೆ ಅವರ ಮಾತಿನ ಅರ್ಥ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದು ಖಚಿತ!
ಈಶ್ವರಪ್ಪ ಆಡಿರುವ ಮಾತು ಪಕ್ಷದ ಇಮೇಜಿಗೆ ಧಕ್ಕೆ ಉಂಟು ಮಾಡುತ್ತಿರುವುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಯಡಿಯೂರಪ್ಪನವರು, ಗುರುವಾರ ಮಾಧ್ಯಮದವರು ಸದರಿ ವಿವಾದದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಏನನ್ನೂ ಹೇಳದೆ ಸುಮ್ಮನೆ ನಡೆದುಹೋದರು. ಏನೇ ಮಾತಾಡಿದರೂ ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗುತ್ತದೆ ಅಂತ ಅವರು ಅಂದುಕೊಂಡಿರಬಹುದು.
ಹಾಗಾಗೇ, ಅವರು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ. ಮೌನ ಬುದ್ಧಿವಂತರ ಲಕ್ಷಣ ಎಂದು ಹೇಳುತ್ತಾರೆ, ಹಿರಿಯ ಮುತ್ಸದ್ದಿ ಯಡಿಯೂರಪ್ಪನವರು ಮಾಡಿದ್ದು ಅದನ್ನೇ-ಸುಮ್ಮನಿರೋದು!
ಇದನ್ನೂ ಓದಿ: ಮೋದಿ ಅಲೆಯಲ್ಲಿ ಮುಂದಿನ ಚುನಾವಣೆ ಗೆಲ್ಲುವ ವಿಶ್ವಾಸ ಇದೆ; 135 ಸ್ಥಾನ ಗೆಲ್ಲಲು ಸಿದ್ಧತೆ ನಡೆಸಲಾಗಿದೆ: ಬಿಎಸ್ ಯಡಿಯೂರಪ್ಪ