ಕಾಂಗ್ರೆಸ್ ಸಮಾವೇಶದ ವೇದಿಕೆಯಲ್ಲಿ ಪ್ರಿಯಾಂಕಾ ಗಾಂಧಿ ಮಾಜಿ ಸಚಿವ ಆಂಜನೇಯ ಮೇಲೆ ರೇಗಿದ್ದು ಯಾಕೆ ಗೊತ್ತಾ
ಇದೆಲ್ಲ ಆಗುವಾಗ ಒಬ್ಬ ಯುವತಿ ಪ್ರಿಯಾಂಕಾ ಬಲಭಾಗದಲ್ಲಿ ನಿಂತಿರುತ್ತಾಳೆ. ಆಕೆಯನ್ನು ಗಮನಿಸುವ ಆಂಜನೇಯ ಯುವತಿಯನ್ನು ಹಿಂದೆ ತಳ್ಳುವ ಪ್ರಯತ್ನ ಮಾಡುತ್ತಾರೆ. ಆಗಲೇ ಕೋಪಗೊಳ್ಳುವ ಪ್ರಿಯಾಂಕಾ, ಆಕೆ ನನ್ನ ಪಕ್ಕದಲ್ಲಿ ನಿಂತಿದ್ರೆ ನಿಮಗೇನು ತೊಂದರೆ ಎನ್ನತ್ತಾ ಯುವತಿಯನ್ನು ತಮ್ಮ ಹತ್ತಿರಕ್ಕೆ ಎಳೆದುಕೊಳ್ಳುತ್ತಾರೆ. ಆಮೇಲೆ ಆಕೆಯ ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತಾಡುತ್ತಾರೆ.
ಚಿತ್ರದುರ್ಗ: ನಗರದಲ್ಲಿ ಇಂದು ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದ (Congress convention) ವೇದಿಕೆಯ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ರಾಜ್ಯದ ಮಾಜಿ ಸಚಿವ ಮತ್ತು ಚಿತ್ರದುರ್ಗ ಭಾಗದ ದೊಡ್ಡ ಕಾಂಗ್ರೆಸ್ ಲೀಡರ್ ಹೆಚ್ ಆಂಜನೇಯ (H Anjaneya) ಅವರ ಮೇಲೆ ರೇಗಿದ ಪ್ರಸಂಗ ಜರುಗಿತು. ಪ್ರಿಯಾಂಕಾ ಅವರನ್ನು ವೇದಿಕೆಯ ಮೇಲೆ ಸತ್ಕರಿಸುವ ಜವಾಬ್ದಾರಿ ಪ್ರಾಯಶಃ ಆಂಜನೇಯ ಅವರಿಗೆ ನೀಡಲಾಗಿತ್ತು. ಅತಿ ಉತ್ಸಹದಿಂದ ಸತ್ಕರಿಸುವ ಕೆಲಸ ಆರಂಭಿಸುವ ಆಂಜನೇಯ ಪ್ರಿಯಾಂಕಾಗೆ ಶಾಲು ಹೊದಿಸುತ್ತಾರೆ, ಪೇಟ ತೊಡಿಸಲು ಹೋದಾಗ ಕಾಂಗ್ರೆಸ್ ನಾಯಕಿ ಬೇಡ ಅನ್ನುತ್ತಾರೆ, ಅದರೂ ಆಂಜನೇಯ ಬಲವಂತಂದದಿಂದ ತೊಡಿಸಲು ಮುಂದಾಗುತ್ತಾರೆ. ಪ್ರಿಯಾಂಕಾ ಬೇಡ ಎಂದು ಸ್ವಲ್ಪ ಗಟ್ಟಿಸ್ವರದಲ್ಲಿ ಹೇಳಿದಾಗ ಸುಮ್ಮನಾಗುವ ಮಾಜಿ ಸಚಿವ ನಂತರ ಖಡ್ಗವನ್ನು ಅವರ ಕೈಗೆ ನೀಡುತ್ತಾರೆ. ಇದೆಲ್ಲ ಆಗುವಾಗ ಒಬ್ಬ ಯುವತಿ ಪ್ರಿಯಾಂಕಾ ಬಲಭಾಗದಲ್ಲಿ ನಿಂತಿರುತ್ತಾಳೆ. ಆಕೆಯನ್ನು ಗಮನಿಸುವ ಆಂಜನೇಯ ಯುವತಿಯನ್ನು ಹಿಂದೆ ತಳ್ಳುವ ಪ್ರಯತ್ನ ಮಾಡುತ್ತಾರೆ. ಆಗಲೇ ಕೋಪಗೊಳ್ಳುವ ಪ್ರಿಯಾಂಕಾ, ಆಕೆ ನನ್ನ ಪಕ್ಕದಲ್ಲಿ ನಿಂತಿದ್ರೆ ನಿಮಗೇನು ತೊಂದರೆ ಎನ್ನತ್ತಾ ಯುವತಿಯನ್ನು ತಮ್ಮ ಹತ್ತಿರಕ್ಕೆ ಎಳೆದುಕೊಳ್ಳುತ್ತಾರೆ. ಆಮೇಲೆ ಆಕೆಯ ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ರಾಹುಲ್ ಗಾಂಧಿ ಕಾಯ್ತಿದ್ದಾರೆ: ಜನಾರ್ದನ ರೆಡ್ಡಿ