ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ರಾಹುಲ್ ಗಾಂಧಿ ಕಾಯ್ತಿದ್ದಾರೆ: ಜನಾರ್ದನ ರೆಡ್ಡಿ
ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿಯಲ್ಲಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಸಿಎಂ ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುವುದಿಲ್ಲ. ಯಾರಿಗೂ ಕೂಡ ದುಡ್ಡನ್ನು ಕೊಡಲ್ಲ. ಆದರೆ ಹೈಕಮಾಂಡ್ಗೆ ದುಡ್ಡು ಕೊಡುವ ಸಿಎಂ ಬೇಕಾಕಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕೊಪ್ಪಳ, ಏಪ್ರಿಲ್ 23: ಕಾಂಗ್ರೆಸ್ ಹೈಕಮಾಂಡ್ಗೆ ದುಡ್ಡು ಕೊಡುವ ಸಿಎಂ ಬೇಕಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯರನ್ನು (Siddaramaiah) ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ (Janardhana Reddy) ವಾಗ್ದಾಳಿ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುವುದಿಲ್ಲ. ಯಾರಿಗೂ ಕೂಡ ದುಡ್ಡನ್ನು ಕೊಡಲ್ಲ. ಆದರೆ ಹೈಕಮಾಂಡ್ಗೆ ದುಡ್ಡು ಕೊಡುವ ಸಿಎಂ ಬೇಕಾಕಿದ್ದಾರೆ ಎಂದು ಹೇಳಿದ್ದಾರೆ.
ಹೈಕಮಾಂಡ್ಗೆ ಡಿ.ಕೆ.ಶಿವಕುಮಾರ್ರಂತಹ ಮುಖ್ಯಮಂತ್ರಿ ಬೇಕಾಗಿದೆ. ಅದಕ್ಕೆ ಡಿ.ಕೆ,ಶಿವಕುಮಾರ್ರನ್ನು ಸಿಎಂ ಮಾಡಲು ರಾಹುಲ್ ಕಾಯುತ್ತಿದ್ದಾರೆ. ಮಂಡ್ಯ ಸಮಾವೇಶದಲ್ಲಿ ರಾಹುಲ್ ಈ ಸಂದೇಶ ರವಾನೆ ಮಾಡಿದ್ದಾರೆ ಎಂದಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ವಿರುದ್ಧ ಮತ್ತೆ ಹರಿಹಾಯ್ದ ಜನಾರ್ದನ ರೆಡ್ಡಿ
ಸಚಿವ ಶಿವರಾಜ್ ತಂಗಡಗಿರನ್ನು ಮಂತ್ರಿ ಎನ್ಬೇಕೋ, ಕಂತ್ರಿ ಎನ್ಬೇಕೋ ದೇವರಿಗೆ ಗೊತ್ತು. ಹೀಗೆ ಮೋದಿ ವಿರುದ್ಧ ಸಚಿವ ಶಿವರಾಜ ತಂಗಡಗಿ ಮಾತನಾಡುತ್ತಿದ್ದರೆ, ಜನರ ಮಂತ್ರಿ ಅಂತಾ ಕರೆಯಲ್ಲ, ಬದಲಾಗಿ ಕಂತ್ರಿ ಎಂದು ಕರೀತಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಅಂದರೆ ಸಂಸ್ಕೃತಿ ಇಲ್ಲದ ಪಕ್ಷ. ಭಾರತ್ ಮಾತಾ ಕೀ ಜೈ ಎನ್ನಲು ಅಲ್ಲಿ ಪರವಾನಗಿ ಪಡೆಯಬೇಕು ಎಂದು ಕಿಡಿಕಾರಿದ್ದಾರೆ.
ಐದು ದಿನದ ಹಿಂದೆ ಹನುಮ ಮಾಲೆಯನ್ನು ಧರಿಸಿದ್ದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ನಿನ್ನೆ ಹನುಮನ ಜನ್ಮಸ್ಥಳ ಅಂಜನಾದ್ರಿಯಲ್ಲಿ ಹನುಮ ಮಾಲೆಯನ್ನು ವಿಸರ್ಜಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಹತ್ತಿ, ಸಚಿವ ಶಿವರಾಜ್ ತಂಗಡಗಿ, ಹನುಮ ಮಾಲೆಯನ್ನು ವಿಸರ್ಜಿಸಿದ್ದಾರೆ. ಆಂಜನೇಯನ ದರ್ಶನ ಪಡೆದ ತಂಗಡಗಿ, ಕೆಲ ಹೊತ್ತು ಹನುಮಾನ ಚಾಲೀಸ್ ಪಠಣ ಕೂಡ ಮಾಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.