ಲೋಕಾಯುಕ್ತ ಕಚೇರಿಗೆ ಆಗಮಿಸಿದ ಹಿಂದಿನ ಮುಡಾ ಆಯುಕ್ತ ನಟೇಶ್ ಮಾಧ್ಯಮಗಳ ಮೇಲೆ ಕಿಡಿ ಕಾರಿದರು

|

Updated on: Nov 19, 2024 | 12:12 PM

ತಮ್ಮ ಕೆಲಸ ತಾವು ಮಾಡುತ್ತಿದ್ದ ಮಾಧ್ಯಮದ ಕೆಮೆರಾಮನ್​ಗಳ ಮೇಲೆ ನಟೇಶ್ ಕಿಡಿ ಕಾರಿದ್ದು ಅನಾವಶ್ಯಕವಾಗಿತ್ತು. ನಿನ್ನೆ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಈಡಿ ಅಧಿಕಾರಿಗಳ ಮುಂದೆ ಹಾಜರಾಗಿ ವಾಪಸ್ಸು ಹೋಗುವಾಗ ನಮ್ಮ ಪ್ರತಿನಿಧಿ ಬೈಟ್​ಗಾಗಿ ಅವರನ್ನು ಹಿಂಬಲಾಸಿದರು. ಅದರೆ ಸ್ವಾಮಿ ಒಂದೂ ಮಾತಾಡದೆ ಹೊರಟುಹೋದರು.

ಮೈಸೂರು: ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತದ ಮುಂದೆ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯಕ್ತ ಡಿಬಿ ನಟೇಶ್ ಹಾಜರಾದರು. ಆದರೆ ಕಚೇರಿಯೊಳಗೆ ಹೋಗುವ ಮೊದಲು ಅವರು ತಮ್ಮ ವಿಶುಯಲ್ಸ್ ಸೆರೆಹಿಡಿಯುತ್ತಿದ್ದ ಮಾಧ್ಯಮ ಕೆಮೆರಾಮನ್ ಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ನನ್ನ ವಿಡಿಯೋ ಯಾಕೆ ಮಾಡ್ತಾ ಇದ್ದೀರಿ? ನಾನೇನು ಡ್ಯಾನ್ಸ್ ಮಾಡ್ತಿದ್ದೀನಾ? ನಿಮಗೆ ಕನಿಷ್ಠ ಕಾಮನ್ ಸೆನ್ಸ್ ಕೂಡ ಇಲ್ಲ ಎನ್ನುತ್ತಾ ಅವರು ಮೇಲಿನ ಕಚೇರಿಗೆ ಮೆಟ್ಟಿಲು ಹತ್ತುತ್ತಾ ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:ಮುಡಾ ಪ್ರಕರಣ ನಿಭಾಯಿಸುವಲ್ಲಿ ಸಿಎಂ ಫೇಲ್​​, ಸಿದ್ದರಾಮಯ್ಯ ವಿರುದ್ಧ ಸಚಿವರು ಬೇಸರ