ವಿಧಾನ ಪರಿಷತ್ ಗೆ ಆಯ್ಕೆ ಬಯಸಿರುವ ರಮೇಶ್ ಕುಮಾರ್ ಕೆಪಿಸಿಸಿ ಅಧ್ಯಕ್ಷರ ನಿವಾಸಕ್ಕೆ ಭೇಟಿ

|

Updated on: May 28, 2024 | 12:13 PM

ಆದರೆ, ಕಳೆದ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ರಮೇಶ್ ಕುಮಾರ್ ಅವರಿಗೆ ಅಧಿಕಾರದಿಂದ ದೂರ ಇರೋದು ಸಾಧ್ಯವಾಗುತ್ತಿಲ್ಲ. ಹಾಗಾಗೇ, ವಿಧಾನ ಪರಿಷತ್ ಗೆ ಕೋಲಾರ ಘಟಕದಿಂದ ಆಯ್ಕೆ ಬಯಸಿದ್ದಾರೆ. ಅವರ ಆಸೆ ಈಡೇರುತ್ತದೆಯೇ? ಶಿವಕುಮಾರ್ ಅವರೇ ಹೇಳಬೇಕು.

ಬೆಂಗಳೂರು: ಜೂನ್ 13 ರಂದು ವಿಧಾನಸಭೆಯಿಂದ ವಿಧಾನ ಪರಿಷತ್ ನ (Legislative Council) 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಟಿಕೆಟ್ ಆಕಾಂಕ್ಷಿಗಳ ಲಾಬಿ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತೆಗೆದುಕೊಂಡು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ತೆರಳಲಿದ್ದಾರೆ. ಕೋಲಾರ ಕಾಂಗ್ರೆಸ್ ಘಟಕದಿಂದ ತಮ್ಮನ್ನು ಅಭ್ಯರ್ಥಿಯಾಗಿ ಪರಿಗಣಿಸಬೇಕೆಂದು ವಿನಂತಿಸಲು ಮಾಜಿ ಸಭಾಧ್ಯಕ್ಷ ಕೆಆರ್ ರಮೇಶ್ ಕುಮಾರ್ (KR Ramesh Kumar) ಅವರು ಇಂದು ಬೆಳಗ್ಗೆ ನಗರದ ಸದಾಶಿವನಗರದಲ್ಲಿರರುವ ಶಿವಕುಮಾರ್ ಮನೆಗೆ ಆಗಮಿಸಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸಪುರದಿಂದ ಪರಾಜಿತರಾಗಿದ್ದ ರಮೇಶ್ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಆದರೆ ಕೋಲಾರ ಮೀಸಲು ಕ್ಷೇತ್ರವಾಗಿರುವುದರಿಂದ ಮತ್ತು ರಾಜ್ಯದ ಬೇರೆ ಲೋಕಸಭಾ ಕ್ಷೇತ್ರಗಳಲ್ಲಿ ರಮೇಶ್ ಕುಮಾರ್ ಜನಪ್ರಿಯರಲ್ಲದ ಕಾರಣ ಪಕ್ಷದ ವರಿಷ್ಠರು ಅವರನ್ನು ಯಾವ ಕ್ಷೇತ್ರಕ್ಕೂ ಪರಿಗಣಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಕಳೆದ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ರಮೇಶ್ ಕುಮಾರ್ ಅವರಿಗೆ ಅಧಿಕಾರದಿಂದ ದೂರ ಇರೋದು ಸಾಧ್ಯವಾಗುತ್ತಿಲ್ಲ. ಹಾಗಾಗೇ, ವಿಧಾನ ಪರಿಷತ್ ಗೆ ಕೋಲಾರ ಘಟಕದಿಂದ ಆಯ್ಕೆ ಬಯಸಿದ್ದಾರೆ. ಅವರ ಆಸೆ ಈಡೇರುತ್ತದೆಯೇ? ಶಿವಕುಮಾರ್ ಅವರೇ ಹೇಳಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗುಜರಾತ್​ ಗೇಮ್ ಝೋನ್​ನಲ್ಲಿ ಅಗ್ನಿ ದುರಂತ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಕಟ್ಟೆಚ್ಚರ ವಹಿಸಲು ಡಿಕೆ ಶಿವಕುಮಾರ್ ಸೂಚನೆ