Ballari: ಗೃಹ ಲಕ್ಷ್ಮಿ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದಾಗಿ ನಂಬಿಸಿ ಮಹಿಳೆಯರಿಂದ ಹಣ ಪೀಕುತ್ತಿದ್ದ ವಂಚಕ ಪೊಲೀಸ್ ವಶಕ್ಕೆ
ಆದರೆ ಗುರುವಾರ ಬೆಳಗ್ಗೆ ಅಮಾಯಕರನ್ನು ವಂಚಿಸುತ್ತಿದ್ದ ಅವರನ್ನು ಅದೃಷ್ಟ ವಂಚಿಸಿದೆ.
ಬಳ್ಳಾರಿ: ಸರ್ಕಾರಗಳು ಜನಪರ ಯೋಜನೆಯೊಂದನ್ನು (populist schemes) ಜಾರಿಗೊಳಿಸಿದಾಗ ಅದರ ಲಾಭ ಪಡೆದುಕೊಳ್ಳಲು ಜನ ಅರ್ಜಿ ಸಲ್ಲಿಸಲು ಮುಂದಾಗುತ್ತಾರೆ ಮತ್ತು ಈ ಅಮಾಯಕ ಜನರನ್ನು (innocent people) ವಂಚಿಸಲೆಂದೇ ಒಂದು ಫ್ರಾಡ್ ಮತ್ತು ಪಾಪಿಗಳ ಗುಂಪು ಹುಟ್ಟಿಕೊಳ್ಳುತ್ತದೆ. ಬಳ್ಳಾರಿಯಲ್ಲಿ ಅಂಥ ಮೋಸಗಾರರ ಮೂರು ತಂಡಗಳು ಗೃಹ ಲಕ್ಷ್ಮಿ (Gruha Lakshmi) ಮತ್ತು ಗೃಹ ಜ್ಯೋತಿ (Gruha Jyoti) ಯೋಜನೆಗೆ ಅರ್ಜಿ ಸಲ್ಲಿಸಲು ಅಣಿಯಾಗಿದ್ದ ಮಹಿಳೆಯರಿಂದ ಅವರ ಪರವಾಗಿ ತಾವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿ ಒಬ್ಬೊಬ್ಬ ಮಹಿಳೆಯಿಂದ ರೂ. 150 ಪೀಕಿದ್ದಾರೆ. ಆದರೆ ಗುರುವಾರ ಬೆಳಗ್ಗೆ ಅಮಾಯಕರನ್ನು ವಂಚಿಸುತ್ತಿದ್ದ ಅವರನ್ನು ಅದೃಷ್ಟ ವಂಚಿಸಿದೆ. ಮಹಿಳೆಯರು ಮತ್ತು ಅವರೊಂದಿಗಿದ್ದ ಪುರುಷರು ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೇರೆ ಎರಡು ತಂಡದ ವಂಚಕರು ಓಡಿಹೋಗಿ ತಪ್ಪಿಸಿಕೊಂಡಿರುವರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ