Gruha Lakshmi Scheme: ಎಚ್ಚರ ಎಚ್ಚರ…ಗೃಹಲಕ್ಷ್ಮಿ ಯೋಜನೆ ಹೆಸರಿಲ್ಲಿ ಬಂದಿವೆ ಮೂರು ನಕಲಿ ಆ್ಯಪ್​

ಗೃಹ ಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಜನರಿಗೆ ಅರ್ಜಿ ಹಾಕಲು ಸರ್ವರ್​ ಸಮಸ್ಯೆಗೆ ಎದುರಾಗಬಾರದು ಎಂದು ಸರ್ಕಾರ ಹೊಸ ಆ್ಯಪ್ ಸಿದ್ಧಪಡಿಸಿದೆ. ಆದ್ರೆ, ಅದು ಬಿಡುಗಡೆಗೂ ಮುನ್ನವೇ ನಕಲಿ ಆ್ಯಪ್​ಗಳ ಹಾವಳಿ ಶುರುವಾಗಿದೆ.

Gruha Lakshmi Scheme: ಎಚ್ಚರ ಎಚ್ಚರ...ಗೃಹಲಕ್ಷ್ಮಿ ಯೋಜನೆ ಹೆಸರಿಲ್ಲಿ ಬಂದಿವೆ ಮೂರು ನಕಲಿ ಆ್ಯಪ್​
ಗೃಹ ಲಕ್ಷ್ಮೀ ಯೋಜನೆ
Follow us
Poornima Agali Nagaraj
| Updated By: ರಮೇಶ್ ಬಿ. ಜವಳಗೇರಾ

Updated on:Jun 28, 2023 | 3:23 PM

ಬೆಂಗಳೂರು: ಅಕ್ಕಿ ತಾಪತ್ರಯ ಒಂದುಕಡೆಯಾದರೆ, ಗೃಹಜ್ಯೋತಿ, ಗೃಹಲಕ್ಷ್ಮೀಯದ್ದು ಮತ್ತೊಂದು ಕಥೆಯಾಗಿದೆ. ಗೃಹಜ್ಯೋತಿ ಸರ್ವರ್ ಸಮಸ್ಯೆಯಾಗುತ್ತಿದ್ದರೆ, ಮತ್ತೊಂದೆಡೆ ಮನೆ ಯಜಮಾನಿಗೆ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ(Gruha Lakshmi Scheme) ಬಾಗಿಲು ತೆರೆದುಕೊಳ್ಳೋದೇ ವಿಳಂಬವಾಗುತ್ತಿದೆ. ಗೃಹಜ್ಯೋತಿ ಗೊಂದಲ, ಗದ್ದಲ, ಸರ್ವರ್ ಡೌನ್‌ನಿಂದ ಸಮಸ್ಯೆ ಎದುಆಗಿದೆ. ಇದಕ್ಕೆ ಮುಕ್ತಿ ನೀಡಲು ಸರ್ಕಾರ ಗೃಹ ಲಕ್ಷ್ಮೀ ಯೋಜನೆಗೆ ಪ್ರತ್ಯೇಕ ಆ್ಯಪ್(Gruha Lakshmi Scheme Application) ಸಿದ್ದಪಡಿಸಿದ್ದು, ಅದರ ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲು ಸರ್ಕಾರ ಪ್ಲ್ಯಾನ್ ಮಾಡಿದೆ. ಆದ್ರೆ, ಸರ್ಕಾರದ ಅಧಿಕೃತ ಗೃಹಲಕ್ಷ್ಮೀ ಆ್ಯಪ್ ಬಿಡುಗಡೆಗೂ ಮುನ್ನ ನಕಲಿ ಆ್ಯಪ್ ಗಳು (Fake Application) ತಲೆ ಎತ್ತಿವೆ.

ಇದನ್ನೂ ಓದಿ: ಗೃಹಲಕ್ಷ್ಮೀಯರಿಗೆ ಇಂದು ಗುಡ್‌ನ್ಯೂಸ್: ಪ್ರತ್ಯೇಕ ಆ್ಯಪ್​​​ ಸಿದ್ಧಪಡಿಸಿದ ಸರ್ಕಾರ, ಯೋಜನೆಗೆ ಏನೇನು ದಾಖಲೆ ಬೇಕು..?

ಹೌದು.. ಪ್ಲೇಸ್ಟೋರ್​​​​ನಲ್ಲಿ ಗೃಹಲಕ್ಷ್ಮೀ ಹೆಸರಿನಲ್ಲಿ ಮೂರು ನಕಲಿ ಆ್ಯಪ್​ಗಳು ಪ್ರತ್ಯಕ್ಷವಾಗಿವೆ. 1. ಗೃಹಲಕ್ಷ್ಮಿ ಸ್ಕೀಮ್ ಎನ್ನುವ ಹೆಸರಿನಲ್ಲಿ ಒಂದು ಆ್ಯಪ್ , 2. ಗೃಹ ಲಕ್ಷ್ಮಿ ಯೋಜನಾ ಆ್ಯಪ್ , 3. ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಎನ್ನುವ ಹೆಸರಿಲ್ಲಿ ಒಟ್ಟು ಮೂರು ನಕಲಿ ಆ್ಯಪ್‌ ಪ್ಲೇ ಸ್ಟೋರಿನಲ್ಲಿ ಪತ್ತೆಯಾಗಿವೆ. ಇವು ನಕಲಿ ಆ್ಯಪ್ ಗಳಾಗಿದ್ದು, ಇದರಿಂದ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ತಪ್ಪಿತಪ್ಪಿ ಈ ನಕಲಿ ಆ್ಯಪ್​ಗಳಲ್ಲಿ ಏನಾದರೂ ಉಪಯೋಗಿಸಿದರೆ ನಕಲಿ ಆ್ಯಪ್​ ಕಿಂಗ್​ಪಿನ್​ಗಳು ನಿಮ್ಮ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಗಳಿವೆ.

‘ಗೃಹಲಕ್ಷ್ಮೀ’ಗಾಗಿ ಪ್ರತ್ಯೇಕ ಆ್ಯಪ್​​​ ಸಿದ್ಧಪಡಿಸಿದ ಸರ್ಕಾರ

ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗುತ್ತೆ ಎಂದು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದಾರೆ. ಅದರಂತೆ ಸರ್ವರ್ ಸಮಸ್ಯೆಗೆ ಕಡಿವಾಣ ಹಾಕಲು ಇದೀಗ ಸರ್ಕಾರವೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ್ದು, ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೇ ಬಾಕಿ ಇದೆ. ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್​​​ನಲ್ಲಿ ಆ್ಯಪ್ ಲಭ್ಯವಾಗಲಿದೆ. ಇನ್ನೂ ಸೇವಾಸಿಂಧು ವೆಬ್​​​ಸೈಟ್​​ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು,

‘ಗೃಹಲಕ್ಷ್ಮೀ’ಯ 2,000ಕ್ಕೆ ಏನು ಮಾಡಬೇಕು?

BPL, APL, ಅಂತ್ಯೋದಯ ಕಾರ್ಡ್​ನಲ್ಲಿ ಮನೆಯೊಡತಿಯ ಹೆಸರಿರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ. ಬೆಂಗಳೂರು ಒನ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು. ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಮನೆ ಒಡತಿಯ ಯಜಮಾನ ಜಿಎಸ್​ಟಿ ರಿರ್ಟನ್ಸ್ ಮಾಡಿರಬಾರದು ಎಂಬ ಮಾನದಂಡಗಳನ್ನು ಅನುಸರಿಸಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:21 pm, Wed, 28 June 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ