ಮಹಿಳೆಯರಲ್ಲಿ ಮನವಿ ಟಿಕೆಟ್​ ಕೇಳಿ ಪಡೆಯಿರಿ: ಶಕ್ತಿ ಯೋಜನೆ ಅರಿವು ಮೂಡಿಸುತ್ತಿರುವ ಕಂಡಕ್ಟರ್ ಹಾಡು ವಿಡಿಯೋ ವೈರಲ್

ಮಹಿಳೆಯರಲ್ಲಿ ಮನವಿ ಟಿಕೆಟ್​ ಕೇಳಿ ಪಡೆಯಿರಿ: ಶಕ್ತಿ ಯೋಜನೆ ಅರಿವು ಮೂಡಿಸುತ್ತಿರುವ ಕಂಡಕ್ಟರ್ ಹಾಡು ವಿಡಿಯೋ ವೈರಲ್

ರಮೇಶ್ ಬಿ. ಜವಳಗೇರಾ
|

Updated on: Jun 25, 2023 | 1:22 PM

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಕೆಎಸ್ ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನಿಂದ ಹಾಡು ಹಾಡುವ ಮೂಲಕ ಟಿಕೆಟ್​ ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ರಾಯಚೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕೆಎಸ್​ಆರ್​ಟಿಸಿ ಬಸ್​ಗಳು ಫುಲ್​ ರಶ್​ ಆಗಿ ಓಡಾಡುತ್ತಿವೆ. ಇನ್ನು ಇದರ ಮಧ್ಯೆ ಕೆಲ ಶಕ್ತಿ ಯೋಜನೆ ಸಂಬಂಧ ಕೆಲವೆಡೆ ಗಲಾಟೆಗಳು ನಡೆಯುತ್ತಿವೆ. ಇನ್ನು ಕಾಮಿಡಿ ಪ್ರಸಂಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಸ್ ನಿರ್ವಾಹಕರು ಟಿಕೆಟ್​ ನೀಡುಲು ಹರಸಾಹಸಪಡುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಅದರಂತೆ ಇಲ್ಲೋರ್ವ ಕಂಡಕ್ಟರ್​, ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸಂಬಂಧ ಕಂಡಕ್ಟರ್ ವಿಭಿನ್ನ ರೀತಿ ಅಭಿಯಾನ ಮಾಡುತ್ತಿದ್ದಾರೆ. ಹೌದು.. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಕೆಎಸ್ ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನಿಂದ ಹಾಡು ಹಾಡುವ ಮುಳಕ ಟಿಕೆಟ್​ ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪಕ್ಕಾ ಡಾ.ರಾಜಕುಮಾರ್ ಅಭಿಮಾನಿಯಾಗಿರುವ ಕಂಡಕ್ಟರ್ ಗುರು ದೇವರಮನಿ, ಅಣ್ಣಾವ್ರ ಹಾಡುಗಳಿಗೆ ಸರ್ಕಾರದ ಶಕ್ತಿ ಯೋಜನೆ ಕುರಿತು ಸಾಹಿತ್ಯ ರಚಿಸಿ ಹಾಡು ಹಾಡುತ್ತಾರೆ. ಸದ್ಯ ಗುರು ದೇವರಮನಿ ವಿಡಿಯೋ ವೈರಲ್ ಆಗುತ್ತಿದೆ.