AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತವರೂರು ಲಕ್ನೋದಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಪ್ರೀತಿಯ ಸ್ವಾಗತ

Video: ತವರೂರು ಲಕ್ನೋದಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಪ್ರೀತಿಯ ಸ್ವಾಗತ

ನಯನಾ ರಾಜೀವ್
|

Updated on: Aug 25, 2025 | 11:23 AM

Share

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ವಾಪಸಾಗಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ತವರೂರು ಲಕ್ನೋನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ತೆರೆದ ಜೀಪಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಶುಭಾಂಶು ಶುಕ್ಲಾ ಅವರು ಕಮರ್ಷಿಯಲ್ ಸ್ಪೇಸ್​​ಫ್ಲೈಟ್​​ನಲ್ಲಿ ಪ್ರಯಾಣಿಸಿದ ಮೊದಲ ಭಾರತೀಯ ವ್ಯಕ್ತಿ.ಉತ್ತರಪ್ರದೇಶದ ಲಕ್ನೋ ಸಂಜಾತರಾದ ಶುಭಾಂಶು ಶುಕ್ಲಾ ಹುಟ್ಟಿದ್ದು 1985, ಅಕ್ಟೋಬರ್ 10ರಂದು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಓದಿದ ಅವರು ಇಂಡಿಯನ್ ಏರ್​ಫೋರ್ಸ್ ಪೈಲಟ್ ಆಗಿ ಸಾಕಷ್ಟು ಅನುಭವ ಪಡೆದಿದ್ಧಾರೆ.

ಲಕ್ನೋ, ಆಗಸ್ಟ್​ 25: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ವಾಪಸಾಗಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ತವರೂರು ಲಕ್ನೋನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ತೆರೆದ ಜೀಪಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಶುಭಾಂಶು ಶುಕ್ಲಾ ಅವರು ಕಮರ್ಷಿಯಲ್ ಸ್ಪೇಸ್​​ಫ್ಲೈಟ್​​ನಲ್ಲಿ ಪ್ರಯಾಣಿಸಿದ ಮೊದಲ ಭಾರತೀಯ ವ್ಯಕ್ತಿ.ಉತ್ತರಪ್ರದೇಶದ ಲಕ್ನೋ ಸಂಜಾತರಾದ ಶುಭಾಂಶು ಶುಕ್ಲಾ ಹುಟ್ಟಿದ್ದು 1985, ಅಕ್ಟೋಬರ್ 10ರಂದು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಓದಿದ ಅವರು ಇಂಡಿಯನ್ ಏರ್​ಫೋರ್ಸ್ ಪೈಲಟ್ ಆಗಿ ಸಾಕಷ್ಟು ಅನುಭವ ಪಡೆದಿದ್ಧಾರೆ.

ಸುಖೋಯ್ 30, ಜಾಗ್ವರ್, ಹಾಕ್, ಡಾರ್ನಿಯರ್ ಇತ್ಯಾದಿ ಜೆಟ್ ವಿಮಾನಗಳನ್ನು 2,000 ಗಂಟೆ ಹಾರಾಟ ಮಾಡಿದ ಅನುಭವಿ.ಅವರ ಸ್ವದೇಶಕ್ಕೆ ಮರಳುವಿಕೆಯನ್ನು ಆಚರಿಸಲು ನಗರದಲ್ಲಿ ಪ್ರಸ್ತುತ ವಿಕ್ಟರಿ ಪೆರೇಡ್ ಆಯೋಜಿಸಲಾಗಿದೆ. ಗಗನಯಾತ್ರಿಗಳು ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಸಿಎಂ ಯೋಗಿ ಅವರನ್ನು ಭೇಟಿ ಮಾಡಲು ಸಹ ನಿರ್ಧರಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ