ಮನೆಯಲ್ಲಿ ಜಗಳವಾಡಿ ಬೈಕ್ ಜೊತೆ ಹೊರಬಿದ್ದ ವ್ಯಕ್ತಿ ಕಂಠಮಟ್ಟ ಮದ್ಯ ಸೇವಿಸಿ ತನ್ನ ವಾಹನಕ್ಕೆ ಬೆಂಕಿಯಿಟ್ಟಿದ್ದು ತಿಕೋಟಾದಲ್ಲಿ
ಆದರೆ ಕಾರಂಡೆ ಮೆದುಳಲ್ಲಿ ಜೀರುಂಡೆ ಸೇರಿಕೊಂಡಿತ್ತು ಮಾರಾಯ್ರೇ. ಅವನು ನೇರವಾಗಿ ಲಿಕ್ಕರ್ ಶಾಪಿಗೆ ಹೋಗಿ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಗುಂಡು ಒಳಗಳಿದರೂ ಅವನ ಕೋಪ ಮಾತ್ರ ಹಾಗೆಯೇ ಇತ್ತು ಅನಿಸುತ್ತದೆ. ಮನೆಗೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದರೆ ನೆಟ್ಟಗಿರುತಿತ್ತು.
ವಿಜಯಪುರ: ಸಿಟ್ಟು ಮತ್ತು ಮದಿರೆಯ ನಶೆ (intoxication) ಮಾನವರಿಂದ ಅನಾಹುತಕಾರಿ ಕೆಲಸಗಳನ್ನು ಮಾಡಿಸುತ್ತದೆ ಅನ್ನೋದಿಕ್ಕೆ ಇಲ್ಲಿ ಹೊತ್ತಿ ಉರಿಯುತ್ತಿರುವ ಬೈಕ್ ಸಾಕ್ಷಿ ಮಾರಾಯ್ರೇ. ಅಂದಹಾಗೆ ಮೊಬೈಲ್ ಫೋನಲ್ಲಿ ಚಿತ್ರೀಕರಿಸಿರುವ ದೃಶ್ಯದ ವಿಡಿಯೋ ನಮಗೆ ಲಭ್ಯವಾಗಿದ್ದು ವಿಜಯಪುರದ ತಿಕೋಟಾ (Tikota) ತಾಲ್ಲೂಕಿನ ದಂದರಗಿ (Dandargi) ಗ್ರಾಮದ ಹತ್ತಿರ. ಈ ಕೃತ್ಯವನ್ನು ಎಸಗಿದ ಮಹಾನುಭಾವನ ಹೆಸರು ಮಲಕಾಡಸಿದ್ಧ ಕಾರಂಡೆ. ವ್ಯಕ್ತಿಯ ಹೆಸರಿನ ಹಾಗೆ ಕೆಲಸಗಳು ಸಹ ವಿಚಿತ್ರವಾಗಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೋಮವಾರ ಬೆಳಗ್ಗೆ ಕಾರಂಡೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದನಂತೆ. ಅದೇ ಸಿಟ್ಟಿನಲ್ಲಿ ಬೈಕನ್ನು ಹತ್ತಿ ಮನೆಯಿಂದ ಹೊರಬಿದ್ದಿದ್ದಾನೆ. ವಿಜಯಪುರದ ಬೇಸಿಗೆ ಬಿಸಿಲಲ್ಲಿ ಯಾವುದಾದರೂ ಮರದ ಕೆಳಗೆ ಅವನು ಹೋಗಿ ಕೂತಿದ್ದರೆ, ಸಿಟ್ಟು ಶಮನಗೊಳ್ಳುತಿತ್ತು.
ಆದರೆ ಕಾರಂಡೆ ಮೆದುಳಲ್ಲಿ ಜೀರುಂಡೆ ಸೇರಿಕೊಂಡಿತ್ತು ಮಾರಾಯ್ರೇ. ಅವನು ನೇರವಾಗಿ ಲಿಕ್ಕರ್ ಶಾಪಿಗೆ ಹೋಗಿ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಗುಂಡು ಒಳಗಳಿದರೂ ಅವನ ಕೋಪ ಮಾತ್ರ ಹಾಗೆಯೇ ಇತ್ತು ಅನಿಸುತ್ತದೆ. ಮನೆಗೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದರೆ ನೆಟ್ಟಗಿರುತಿತ್ತು. ಆದರೆ ಅವನಿಗೆ ಸಿಟ್ಟನ್ನು ಯಾವುದೋ ರೂಪದಲ್ಲಿ ಹೊರಹಾಕಬೇಕಿತ್ತು.
ಅದಕ್ಕಾಗಿ ಅವನು ಮಾಡಿದ್ದ್ದು ಮಾತ್ರ ವಿಲಕ್ಷಣ ಕೆಲಸ. ದಂದರಗಿ ಗ್ರಾಮದ ಹೊರಭಾಗಕ್ಕೆ ಹೋಗಿರುವ ಅವನು, ಕಂದಕದಂತೆ ಕಾಣುವ ಜಾಗದಲ್ಲಿ ಬೈಕನ್ನು ದೂಡಿದ್ದಾನೆ. ಆಮೇಲೆ ಟ್ಯಾಂಕ್ ನಿಂದ ಪೆಟ್ರೋಲ್ ತೆಗೆದು ಗಾಡಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ತಿಕೋಟಾದ ರಣಬಿಸಿಲು ಬೈಕ್ ಸಂಪೂರ್ಣವಾಗಿ ಅಗ್ನಿಗಾಹುತಿಯಾಗಲು ನೆರವಾಗಿದೆ.
ತನ್ನ ಬೈಕಿಗೆ ತಾನೇ ಹಚ್ಚಿ ಕಾರಂಡೆ ಪರಾರಿಯಾಗಿದ್ದಾನೆ. ತಿಕೋಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

