AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ

ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ

ಮದನ್​ ಕುಮಾರ್​
|

Updated on: Oct 30, 2026 | 5:18 PM

Share

‘ಬಿಗ್ ಬಾಸ್’ ಶೋನಲ್ಲಿ ಸ್ನೇಹ, ಪ್ರೀತಿ, ಸಂಬಂಧಗಳು ಹುಟ್ಟಿಕೊಳ್ಳುವುದು ಸಹಜ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಹೊಸ ಸಂಚಿಕೆಯಲ್ಲಿ ಗಗನ್ ಚಿನ್ನಪ್ಪ, ತಾಂಡವ್ ರಾಮ್, ಸೋನಿಕಾ ಗೌಡ, ಗಾನವಿ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ. ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಬಿಗ್ ಬಾಸ್’ ಶೋನಲ್ಲಿ ಸ್ನೇಹ, ಪ್ರೀತಿ, ಸಂಬಂಧಗಳು ಹುಟ್ಟಿಕೊಳ್ಳುವುದು ಸಹಜ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಹೊಸ ಸಂಚಿಕೆಯಲ್ಲಿ ಗಗನ್ ಚಿನ್ನಪ್ಪ, ತಾಂಡವ್ ರಾಮ್, ಸೋನಿಕಾ ಗೌಡ, ಗಾನವಿ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ. ‘ಗಂಡನಾಗಲು ತಾಂಡವ್ ಸೂಕ್ತ ವ್ಯಕ್ತಿ. ಮದುವೆ ಆಗುವ ಹುಡುಗಿಗೆ ನೀವು ಮನರಂಜನೆ ಕೊಡುತ್ತೀರಿ. ಬೋರ್ ಆಗಲು ಬಿಡಲ್ಲ’ ಎಂದು ಸೋನಿಕಾ ಹೇಳಿದ್ದಾರೆ. ‘ಸೋನಿಕಾ ಮತ್ತು ತಾಂಡವ್ ಯಾಕೆ ಮದುವೆ ಆಗಬಾರದು? ಇಬ್ಬರದ್ದು ಒಳ್ಳೆಯ ಜೋಡಿ’ ಎಂದು ಗಗನ್ ಹೇಳಿದ್ದಾರೆ. ‘ಆದರೆ ಸೋನಿಕಾ ಅವರು ಜಾಸ್ತಿ ವಾಕ್ ಹೋಗಿರುವುದು ಗಗನ್ ಜೊತೆ. ಇವನು ಸಖತ್ ಆಗಿ ಇದ್ದಾನೆ’ ಎಂದ ತಾಂಡವ್ ಅವರು ಹೇಳಿದ್ದಾರೆ. ಅಕ್ಟೋಬರ್ 30ರ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More