‘ಮುಂಗಾರು ಮಳೆ’ ರೀತಿಯ ಕಾಲ ಈಗ ಇಲ್ಲ: ಆ ದಿನಗಳನ್ನು ನೆನಪಿಸಿಕೊಂಡ ಮನೋಮೂರ್ತಿ
‘ಮುಂಗಾರು ಮಳೆ’ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ಮ್ಯಾಜಿಕ್ ಮಾಡಿದ್ದರು. ಆ ಸಿನಿಮಾ ಬಿಡುಗಡೆ ಆಗಿ 18 ವರ್ಷಗಳು ಕಳೆದಿವೆ. ಆ ನೆನಪುಗಳನ್ನು ಈಗ ಮನೋಮೂರ್ತಿ ಅವರು ಮೆಲುಕು ಹಾಕಿದ್ದಾರೆ. ಅಲ್ಲದೇ, ಈಗ ಕಾಲ ಯಾವ ರೀತಿ ಬದಲಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
‘ಆಗ ಜನರು ಸಿನಿಮಾಗಾಗಿ ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಈಗ ಒಟಿಟಿ ಬಂದಿದೆ. ಅದರಲ್ಲಿ ದೊಡ್ಡ ಪರದೆಯ ಫೀಲ್ ಸಿಗಲ್ಲ. ಮತ್ತೆ ಜನರಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಮನಸ್ಥಿತಿ ಬರಬೇಕು’ ಎಂದು ಮನೋಮೂರ್ತಿ ಹೇಳಿದ್ದಾರೆ. ‘ಅಮೆರಿಕಾ ಅಮೆರಿಕಾ’, ‘ಮುಂಗಾರು ಮಳೆ’ ರೀತಿಯ ಸೂಪರ್ಹಿಟ್ ಸಿನಿಮಾಗೆ ಸಂಗೀತ ನೀಡಿದ ಅವರು ಈಗ ‘ಗಜರಾಮ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಪ್ರತಿ ಸಿನಿಮಾ ಕೂಡ ತಮ್ಮ ಮೊದಲನೇ ಸಿನಿಮಾ ಎಂಬ ರೀತಿಯಲ್ಲಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.