ತಾವೇ ರಚಿಸಿದ ಭಜನೆಯಿಂದ ರಾಮನಿಗೆ ಭಕ್ತಿ, ಶ್ರದ್ಧೆ ಸಮರ್ಪಿಸಿದ ಮೈಸೂರಿನ ಗಣಪತಿ ಸಚ್ಚಿದಾನಂದ ಶ್ರೀ
ಅವರ ಕಂಚಿನ ಕಂಠದ ಮೂಲಕ ಹೊರಬೀಳುವ ರಾಮನ ಸ್ತುತಿಗೀತೆ ನಿಮ್ಮನ್ನು ನಿಸ್ಸಂದೇಹವಾಗಿ ಭಕ್ತಿಪರವಶರನ್ನಾಗಿಸುತ್ತದೆ. ಅವರ ಸ್ತುತಿಗೀತೆ ಅಯೋಧ್ಯೆ ವಾಸಿ ರಾಮ ನಮೋ ದ್ವಾರಕಾ ವಾಸಿ ಕೃಷ್ಣ ನಮೋ ಅಂತ ಶುರುವಾಗುತ್ತದೆ. ಶ್ರೀಗಳು ರಾಮನ ಜೊತೆ ದ್ವಾರಕೆಯ ಕೃಷ್ಣನಿಗೂ ಶ್ರದ್ಧೆಯಿಂದ ನಮಿಸುತ್ತಾರೆ.
ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಮಯ ಸನಿಹವಾಗುತ್ತಿರುವಂತೆಯೇ ಭಾರತ ಭಕ್ತಿಸಾಗರದಲ್ಲಿ ಮುಳುಗಿದೆ. ರಾಮನ ಭಕ್ತರು ತಮ್ಮದ ಅದ ರೀತಿಯಲ್ಲಿ ಫ್ರಭು ರಾಮನಿಗೆ ಶ್ರದ್ಧೆ ನಿಷ್ಠೆಗಳನ್ನು ಸಮರ್ಪಿಸುತ್ತಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಗಣಪತಿ ಆಶ್ರಮದ (Ganapati Sachchidananda Ashram) ಬಗ್ಗೆ ನೀವು ಕೇಳಿರುತ್ತೀರಿ. ಇಲ್ಲಿನ ಗುರುಗಳಾಗಿರುವ ಗಣಪತಿ ಸಚ್ಚಿದಾನಂದ ಶ್ರೀಗಳು (Ganapati Sachchidananda Sri) ಶ್ರೀರಾಮನ ಭಜನೆಯೊಂದನ್ನು (Ram Bhajan) ತಾವೇ ರಚಿಸಿ ಅದನ್ನು ಟಿವಿ9 ಕನ್ನಡ ವಾಹಿನಿಗಾಗಿ ಪ್ರಸ್ತುತಪಡಿಸಿದ್ದಾರೆ. ಅವರ ಕಂಚಿನ ಕಂಠದ ಮೂಲಕ ಹೊರಬೀಳುವ ರಾಮನ ಸ್ತುತಿಗೀತೆ ನಿಮ್ಮನ್ನು ನಿಸ್ಸಂದೇಹವಾಗಿ ಭಕ್ತಿಪರವಶರನ್ನಾಗಿಸುತ್ತದೆ. ಅವರ ಸ್ತುತಿಗೀತೆ ಅಯೋಧ್ಯೆ ವಾಸಿ ರಾಮ ನಮೋ ದ್ವಾರಕಾ ವಾಸಿ ಕೃಷ್ಣ ನಮೋ ಅಂತ ಶುರುವಾಗುತ್ತದೆ. ಶ್ರೀಗಳು ರಾಮನ ಜೊತೆ ದ್ವಾರಕೆಯ ಕೃಷ್ಣನಿಗೂ ಶ್ರದ್ಧೆಯಿಂದ ನಮಿಸುತ್ತಾರೆ. ಸೀತಾಲೋಲ ರಾಮ ನಮೋ ಜಯಜಯ ರಾಮ ಅಂತ ಆವರು ಹಾಡುತ್ತಿದ್ದರೆ ಆಶ್ರಮದಲ್ಲಿರುವ ಭಕ್ತಗಣ ಕೋರಸ್ ಆಗುತ್ತಾರೆ. ಭಜನೆಯ ಬಳಿಕ ಶ್ರೀಗಳು ಬಾಲರಾಮ ಹರಿ ಶ್ರೀರಾಮ ಕೀ ಜೈ, ಬಾಲರಾಮ ಚಂದ್ರ ಕೀ ಜೈ, ಅಯೋಧ್ಯಾವಾಸಿ ರಾಮಚಂದ್ರ ಕೀ ಜೈ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ