ರಾಮಮಂದಿರ ಪ್ರಾಣ ಪ್ರತಿಷ್ಠೆ ಪಾವನ ಸಮಯದಲ್ಲಿ ತೆಪ್ಪಗಿರುವಂತೆ ಸಿದ್ದರಾಮಯ್ಯ, ಅನಂತಕುಮಾರ್ ಹೆಗಡೆಗೆ ಈಶ್ವರಪ್ಪ ಕಿವಿಮಾತು

ರಾಮಮಂದಿರ ಪ್ರಾಣ ಪ್ರತಿಷ್ಠೆ ಪಾವನ ಸಮಯದಲ್ಲಿ ತೆಪ್ಪಗಿರುವಂತೆ ಸಿದ್ದರಾಮಯ್ಯ, ಅನಂತಕುಮಾರ್ ಹೆಗಡೆಗೆ ಈಶ್ವರಪ್ಪ ಕಿವಿಮಾತು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 19, 2024 | 2:30 PM

ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಹೋಗಲು ದ್ವಂದ್ವ ನಿಲುವು ವ್ಯಕ್ತಪಡಿಸುತ್ತಿರುವ ಸಿದ್ದರಾಮಯ್ಯ ಬಗ್ಗೆ ಮಾತಾಡಿದ ಈಶ್ವರಪ್ಪ ಅಲ್ಲಿಗೆ ಹೋಗೋದು ಬಿಡೋದು ಅವರ ವೈಯಕ್ತಿಕ ವಿಚಾರ, ಆದರೆ ಅವರು ರಾಮಭಕ್ತರಿಗೆ ಘಾಸಿಯನ್ನುಂಟು ಮಾಡುವ ಹೇಳಿಕೆ ನೀಡಬಾರದು ಎಂದು ಹೇಳಿದರು.

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ (MP Ananth Kumar Hegde) ಇಬ್ಬರಿಗೂ ರಾಮಮಂದಿರದ ಪ್ರತಿಷ್ಠಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ 3-4 ದಿನಗಳ ಕಾಲ ಪರಸ್ಪರ ಕೆಸರೆರಚಾಟದಲ್ಲಿ ತೊಡಗದೆ ಸುಮ್ಮನಿರಲು ಮನವಿ ಮಾಡಿದರು. ರಾಮನ ಬಗ್ಗೆಯೂ ಟೀಕೆ-ಟಿಪ್ಪಣಿ ಮಾಡೋದು ಬೇಡ ಕೇವಲ ಗುಣಗಾನ ಮಾಡಿ ಅಂತ ಸಿದ್ದರಾಮಯ್ಯ ಬೆಂಬಲಿಗರಿಗೆ ಈಶ್ವರಪ್ಪ ಹೇಳಿದರು. ಅನಂತಕುಮಾರ ಒಬ್ಬ ದೈವಭಕ್ತ ಮತ್ತು ದೇಶಭಕ್ತ ಅಂತ ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಹಿಂದೆ ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಷ್ಟ್ರಧ್ವಜ ಹಾರಿಸಲು ಪೊಲೀಸರಿಂದ ಗುಂಡು ಹಾರಬಹುದಾದ ಸಾಧ್ಯತೆಯಿದ್ದರೂ ಲೆಕ್ಕಿಸದೆ ಜೀವವನ್ನು ಪಣಕ್ಕಿಟ್ಟು ತಮ್ಮನ್ನು ಕೂಡಿಹಾಕಿದ್ದ ಸ್ಥಳದಿಂದ ಜಂಪ್ ಮಾಡಿ ಆಚೆ ಬಂದಿದ್ದರು ಎಂದು ಈಶ್ವರಪ್ಪ ಹೇಳಿದರು. ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಹೋಗುವ ಬಗ್ಗೆ ದ್ವಂದ್ವ ನಿಲುವು ವ್ಯಕ್ತಪಡಿಸುತ್ತಿರುವ ಸಿದ್ದರಾಮಯ್ಯ ಬಗ್ಗೆ ಮಾತಾಡಿದ ಈಶ್ವರಪ್ಪ ಅಲ್ಲಿಗೆ ಹೋಗೋದು ಬಿಡೋದು ಅವರ ವೈಯಕ್ತಿಕ ವಿಚಾರ, ಆದರೆ ಅವರು ರಾಮಭಕ್ತರಿಗೆ ಘಾಸಿಯನ್ನುಂಟು ಮಾಡುವ ಹೇಳಿಕೆ ನೀಡಬಾರದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ