‘ಪಿನಾಕ’ ಸಿನಿಮಾಗೆ ಪವರ್ಫುಲ್ ಡೈಲಾಗ್ ಬರೆದ ರಘು ನಿಡುವಳ್ಳಿಗೆ ಗಣೇಶ್ ಮೆಚ್ಚುಗೆ
ಹೊಸ ವರ್ಷದ ಆರಂಭದಲ್ಲೇ ನಟ ಗಣೇಶ್ ಅವರು ಹೊಸ ಸಿನಿಮಾ ‘ಪಿನಾಕ’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ನಿರ್ಮಾಣ ಆಗಲಿರುವ ಈ ಚಿತ್ರಕ್ಕೆ ಕೊರಿಯೋಗ್ರಾಫರ್ ಧನಂಜಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆ ವೇಳೆ ಗಣೇಶ್ ಅವರು ಚಿತ್ರತಂಡದ ಪರಿಚಯ ಮಾಡಿಕೊಟ್ಟರು.
‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಪಿನಾಕ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇಂದು (ಜನವರಿ 2) ಸುದ್ದಿಗೋಷ್ಠಿ ನಡೆಸಿ ಟೀಸರ್ ಬಗ್ಗೆ ಚಿತ್ರತಂಡ ಮಾತನಾಡಿದೆ. ಈ ಸಿನಿಮಾದ ಟೀಸರ್ನಲ್ಲಿ ಗಣೇಶ್ ಅವರ ಡೈಲಾಗ್ ಹೈಲೈಟ್ ಆಗಿದೆ. ಡೈಲಾಗ್ ಬರೆದ ರಘು ನಿಡುವಳ್ಳಿ ಅವರ ಬಗ್ಗೆ ಗಣೇಶ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.