ಇದೆಂತಾ ಅವ್ಯವಸ್ಥೆ; ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ನಗರದ ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಟ್ಯಾಂಕಿ ಕರೆಗಳ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆ ಮಾಡಲಾಗಿದ್ದು ಗಣೇಶ ಮೂರ್ತಿಗಳು ಕರಗದೆ ತೇಲುತ್ತಿವೆ. ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಗಣೇಶ ವಿಸರ್ಜನೆ ಮಾಡಲಾಗಿದೆ. ಪಿಒಪಿ ಗಣೇಶ ಮೂರ್ತಿಗಳಿಂದ ಕಲ್ಯಾಣಿಗಳ ನೀರು ಕಲುಷಿತವಾಗಿದೆ.
ಬೆಂಗಳೂರು, ಸೆ.18: ನಗರದಲ್ಲಿ ನಿನ್ನೆ ಗಣೇಶ ವಿಸರ್ಜನೆ ಅದ್ದೂರಿಯಿಂದ ಸಾಗಿದೆ. ಅದರಲ್ಲೂ ಗಣೇಶ ವಿಸರ್ಜನೆಗೆ ಕೊನೇ ದಿನವಾದ ಹಿನ್ನೆಲೆ ಇಡೀ ರಾತ್ರಿ ವಿಸರ್ಜನೆ ಮಾಡಲಾಗಿದೆ. ನಗರದ ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಟ್ಯಾಂಕಿ ಕರೆಗಳ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆ ಮಾಡಲಾಗಿದ್ದು ಗಣೇಶ ಮೂರ್ತಿಗಳು ಕರಗದೆ ತೇಲುತ್ತಿವೆ. ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಗಣೇಶ ವಿಸರ್ಜನೆ ಮಾಡಲಾಗಿದೆ. ಬಹುತೇಕ ಗಣೇಶ ಮೂರ್ತಿಗಳ ಪೈಕಿ ಪಿಒಪಿ ಗಣೇಶ ಮೂರ್ತಿಗಳೇ ಹೆಚ್ಚಾಗಿ ಕಂಡುಬಂದಿವೆ. ಪಿಒಪಿ ಗಣೇಶ ಮೂರ್ತಿಗಳಿಂದ ಕಲ್ಯಾಣಿಗಳ ನೀರು ಕಲುಷಿತವಾಗಿದೆ.
ಇನ್ನು ಕೆಲ ಕಡೆ ಪಿಒಪಿ ಗಣೇಶವನ್ನು ವಿಸರ್ಜನೆ ಮಾಡದೇ ಹಾಗೇ ಇಡಲಾಗಿದೆ. ನೂರಾರು ಗಣೇಶ ಮೂರ್ತಿಗಳನ್ನ ಹಾಗೇ ಇಡಲಾಗಿರುವುದು ಕಂಡು ಬಂದಿದೆ. ನಗರದ ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ನೂರಾರು ಪಿಒಪಿ ಗಣೇಶ ಮೂರ್ತಿಗಳು ಪತ್ತೆಯಾಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ