ಪ್ರಧಾನಿ ಮೋದಿಯವರನ್ನು ಭೇಟಿಯಾದ ಭಾರತದ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಜರ್ಮನಿಯ ಕ್ಯಾಸಂಡ್ರಾ ಮೇ ಸ್ಪಿಟ್ಮನ್

ಕಳೆದ ತಿಂಗಳು 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭದಲ್ಲಿ ಕ್ಯಾಸಂಡ್ರಾ, ಹಾಡಿದ ‘ರಾಮ ಆಯೇಂಗೆ....’ ಹಾಡನ್ನು ಕೇಳಿ ಭಾರತೀಯರು ಮಂತ್ರಮುಗ್ಧರಾಗಿದ್ದರು. ಅವರ ಹಾಡು ಇಂಟರ್ನೆಟ್ ನಲ್ಲಿ ಅವ್ಯಾಹತವಾಗಿ ಹರಿದಾಡಿತ್ತು.

ಪ್ರಧಾನಿ ಮೋದಿಯವರನ್ನು ಭೇಟಿಯಾದ ಭಾರತದ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಜರ್ಮನಿಯ ಕ್ಯಾಸಂಡ್ರಾ ಮೇ ಸ್ಪಿಟ್ಮನ್
|

Updated on: Feb 27, 2024 | 7:37 PM

ಚೆನೈ: ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ತಿರುಪೂರ ಜಿಲ್ಲೆಯಲ್ಲಿರುವ ಪಲ್ಲಾದಂ (Palladam) ಹೆಸರಿನ ಊರಲ್ಲಿ ಇಂದು ಜರ್ಮನಿಯ ಬಾಲಗಾಯಕಿ ಕ್ಯಾಸಂಡ್ರಾ ಮೇ ಸ್ಪಿಟ್ಮನ್ (Cassandra Mae Spittmann) ಮತ್ತು ಅವರ ತಾಯಿಯನ್ನು ಭೇಟಿಯಾದರು. ನಿಮಗೆ ನೆನಪಿರಬಹುದು, ಪ್ರಧಾನಿ ಮೋದಿಯವರು ತಮ್ಮ ಮಾಸಿಕ ಮನ್ ಕೀ ಬಾತ್ ಕಾರ್ಯಕ್ರಮದ ಒಂದು ಎಪಿಸೋಡ್ ನಲ್ಲಿ ಕ್ಯಾಸಂಡ್ರಾ ಮೇ ಸ್ಪಿಟ್ಮನ್ ಬಗ್ಗೆ ಮಾತಾಡಿದ್ದರು. ಕ್ಯಾಸಂಡ್ರಾ ವಿದೇಶಿಯರಾದರೂ ಭಾರತದ ನಾನಾ ಭಾಷೆಗಳಲ್ಲಿ ಆಧ್ಯಾತ್ಮಿಕ ಹಾಡುಗಳನ್ನು ಹಾಡುತ್ತಾರೆ. ಪಲ್ಲಾದಂನಲ್ಲಿ ಇವತ್ತು ಅವರು ಪ್ರಧಾನಿ ಮೋದಿ ಅವರ ಎದುರು ಅಚ್ಯುತಂ ಕೇಶವಂ ತಮಿಳು ಭಕ್ತಿಗೀತೆ ಹಾಡಿದರು. ಕಳೆದ ತಿಂಗಳು 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭದಲ್ಲಿ ಕ್ಯಾಸಂಡ್ರಾ, ಹಾಡಿದ ‘ರಾಮ ಆಯೇಂಗೆ….’ ಹಾಡನ್ನು ಕೇಳಿ ಭಾರತೀಯರು ಮಂತ್ರಮುಗ್ಧರಾಗಿದ್ದರು. ಅವರ ಹಾಡು ಇಂಟರ್ನೆಟ್ ನಲ್ಲಿ ಅವ್ಯಾಹತವಾಗಿ ಹರಿದಾಡಿತ್ತು. ಕ್ಯಾಸಂಡ್ರಾ ದೃಷ್ಟಿ ಮಾಂದ್ಯತೆಯಿಂದ ಬಳಲುತ್ತಿದ್ದಾರೆ ಅಂದರೆ ನಂಬ್ತೀರಾ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Modi Mann Ki Baat: ಹಳ್ಳಿಗಳಲ್ಲಿರುವ ಪ್ರತಿಯೊಂದು ಮಹಿಳೆಯನ್ನೂ ಲಕ್ಷಾಧಿಪತಿಯನ್ನಾಗಿ ಮಾಡುವುದು ನಮ್ಮ ಧ್ಯೇಯ: ಮೋದಿ

Follow us