ಬಿ ಎಮ್ ಡಬ್ಲ್ಯೂ ಐಎಕ್ಸ್ ಇಲೆಕ್ಟ್ರಿಕ್ ಕಾರಿಗಾಗಿ ಕಾಯುತ್ತಿದ್ದೀರಾ? ಇನ್ನು 4 ತಿಂಗಳು ಮಾತ್ರ, 2022 ಏಪ್ರಿಲ್​​​​ನಲ್ಲಿ ನಿಮಗದು ಸಿಗಲಿದೆ!

ಮುಂಭಾಗದ ಬಂಪರ್ ಎಸ್ ಯುವಿಯ ಎಲ್ಲಾ-ಎಲೆಕ್ಟ್ರಿಕ್ ಗುಣಲಕ್ಷಣಗಳನ್ನು ಸೂಚಿಸುವ ನೀಲಿ ಆಕ್ಸೆಂಟ್​ಗಳನ್ನು ಹೊಂದಿದೆ. ಬಾನೆಟ್ ಕೂಡ ಕೆತ್ತನೆಯ ಮತ್ತು ಗಡಸುತನದ ಲುಕ್​ನೊಂದಿಗೆ ಬರುತ್ತದೆ.

TV9kannada Web Team

| Edited By: Arun Belly

Dec 14, 2021 | 6:56 PM

ನಾವು ಹೊಸ ಎಲೆಕ್ಟ್ರಿಕ್ ಕಾರು ಲಾಂಚ್ ಆದಾಗೆಲ್ಲ ಇದನ್ನೇ ಹೇಳುತ್ತೇವೆ, ಇನ್ನೇನಿದ್ರೂ ಇಲೆಕ್ಟ್ರಿಕ್ ವಾಹನಗಳ ಜಮಾನಾ ಅಂತ. ಜರ್ಮನಿಯ ಲಕ್ಸುರಿ ಕಾರ್ ಬ್ರ್ಯಾಂಡ್ ಬಿ ಎಮ್ ಡಬ್ಲ್ಯೂ ಸಹ ಒಂದು ಸಂಪೂರ್ಣ ವಿದ್ಯುಚ್ಛಾಲಿತ ಎಸ್ ಯು ವಿ ಬಿ ಎಮ್ ಡಬ್ಲ್ಯೂ ಐಎಕ್ಸ್ ಕಾರನ್ನು ಭಾರತದಲ್ಲಿ ಲಾಂಚ್ ಮಾಡಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದ ಇನ್ನು 4 ತಿಂಗಳಲ್ಲಿ ನಮ್ಮ ರಸ್ತೆಗಳ ಮೇಲೆ ಕಾಣಿಸಿಕೊಳ್ಳಲಿದೆ. ಬಿ ಎಮ್ ಡಬ್ಲ್ಯೂ ಐಎಕ್ಸ್ ಕಾರು ನೇರವಾಗಿ ಆಡಿ ಎ-ಟ್ರಾನ್, ಮರ್ಸಿಡಿಸ್-ಬೆಂಜ್ ಈಕ್ಯೂಸಿ ಮತ್ತು ಪೋಶೆ ಟೇಕಾನ್ ಜೊತೆ ಸ್ಪರ್ಧೆಗೆ ಬೀಳಲಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಿ ಎಮ್ ಡಬ್ಲ್ಯೂ ಐಎಕ್ಸ್ ಇಲೆಕ್ಟ್ರಿಕ್ ಎಸ್ ಯು ವಿ ಯುರೋ ಎನ್​ಸಿಎಪಿ ನೀಡಿರುವ 5-ಸ್ಟಾರ್ ಸುರಕ್ಷೆ ರೇಟಿಂಗ್ ನೊಂದಿಗೆ ಬರುತ್ತದೆ.

ಬಿ ಎಮ್ ಡಬ್ಲ್ಯೂ ಐಎಕ್ಸ್ ಇಲೆಕ್ಟ್ರಿಕ್ ಎಸ್ ಯು ವಿ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಾರಿನ ಮುಂಭಾಗದ ಫೇಸಿಯಾ ತನ್ನ ಭವ್ಯವಾದ ಶೈಲಿಯೊಂದಿಗೆ ಸುಲಭವಾಗಿ ನೋಡುಗರ ಗಮನ ಸೆಳೆಯುತ್ತದೆ. ಇದು ಬಿ ಎಮ್ ಡಬ್ಲ್ಯೂ ನ ದೊಡ್ಡ ಕಿಡ್ನಿ ಗ್ರಿಲ್ಲನ್ನು ಕಪ್ಪು ಥೀಮ್‌ನೊಂದಿಗೆ ಪಡೆದಿದ್ದು, ಡ್ಯುಯಲ್-ಬೀಮ್ ಗೋಚರಿಸುವಿಕೆಯೊಂದಿಗೆ ನಯವಾದ ಎಲ್ ಇ ಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆಯಲ್ಪಟ್ಟಿದೆ.

ಮುಂಭಾಗದ ಬಂಪರ್ ಎಸ್ ಯುವಿಯ ಎಲ್ಲಾ-ಎಲೆಕ್ಟ್ರಿಕ್ ಗುಣಲಕ್ಷಣಗಳನ್ನು ಸೂಚಿಸುವ ನೀಲಿ ಆಕ್ಸೆಂಟ್​ಗಳನ್ನು ಹೊಂದಿದೆ. ಬಾನೆಟ್ ಕೂಡ ಕೆತ್ತನೆಯ ಮತ್ತು ಗಡಸುತನದ ಲುಕ್​ನೊಂದಿಗೆ ಬರುತ್ತದೆ.

ಸೈಡ್ ಪ್ರೊಫೈಲ್‌ಗೆ ನಾವು ಬಂದಿದ್ದೇಯಾದರೆ, ಬಿ ಎಮ್ ಡಬ್ಲ್ಯೂ ಸ್ಪೋರ್ಟಿ ಮಿಶ್ರಲೋಹದ ಚಕ್ರಗಳು, ಕಪ್ಪು ಸೈಡ್ ಬಾಡಿ ಕ್ಲಾಡಿಂಗ್‌ನೊಂದಿಗೆ ಕಪ್ಪು ಆಕ್ಸೆಂಟ್ಗಳು, ಕಪ್ಪು ಗಾಜಿನ ಪ್ರದೇಶವನ್ನು ಹೊಂದಿದೆ. ಹಿಂಭಾಗದ ಪ್ರೊಫೈಲ್ ನೀಲಿ ಆಕ್ಸೆಂಟ್​ಗಳೊಂದಿಗೆ ಬೇರಿಂಗ್ ಸ್ಲೀಕ್ ಎಲ್ಇಡಿ ಟೈಲ್‌ಲೈಟ್‌ಗಳು, ಸ್ಪೋರ್ಟಿ ರೂಫ್ ಸ್ಪಾಯ್ಲರ್ ಮತ್ತು ಕಪ್ಪು ಬಂಪರ್‌ನೊಂದಿಗೆ ಬರುತ್ತದೆ. ಇಳಿಜಾರು ಛಾವಣಿಯು ಎಸ್​ಯುವಿ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದಹಾಗೆ ಬಿ ಎಮ್ ಡಬ್ಲ್ಯೂ ಐಎಕ್ಸ್ ಇಲೆಕ್ಟ್ರಿಕ್ ಎಸ್ ಯು ವಿಯ ಎಕ್ಸ್ ಶೋರೂಮ್ ಬೆಲೆ ಭಾರತದಲ್ಲಿ ಎಷ್ಟಾಗಬಹುದೆಂದು ಊಹಿಸಬಲ್ಲಿರಾ? ರೂ 1.16 ಕೋಟಿ!

ಇದನ್ನೂ ಓದಿ:  Ayra Yash: ಯಥರ್ವ್​ಗೆ ಸ್ನ್ಯಾಕ್ಸ್ ತಿನ್ನಿಸಲು ಹೋದ ಐರಾ; ಆಮೇಲೇನಾಯ್ತು? ವಿಡಿಯೋ ನೋಡಿ

Follow us on

Click on your DTH Provider to Add TV9 Kannada