ಬಾಗಲಕೋಟೆ: ಘಟಪ್ರಭಾ ‌ನದಿ ಘರ್ಜನೆ, ರೈತರ ಬೆಳೆಗೆ ಕಂಟಕ ತಂದ ಪ್ರವಾಹ

| Updated By: Ganapathi Sharma

Updated on: Aug 01, 2024 | 2:55 PM

ಘಟಪ್ರಭಾ ನದಿಯ ಅಬ್ಬರಕ್ಕೆ ಮುಧೋಳ-ಯಾದವಾಡ ಸೇತುವೆ ಭಾಗಶಃ ಮುಳುಗಡೆಯಾಗಿದೆ. ಘಟಪ್ರಭಾ ‌ತೀರ ಚಿಕ್ಕೂರು ಗ್ರಾಮದಲ್ಲಿ ಈರುಳ್ಳಿ, ಕಬ್ಬು ಬೆಳೆಗಳು ನಾಶವಾಗಿವೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಘಟಪ್ರಭಾ ನದಿಯ ಅಬ್ಬರ, ಸೇತುವೆ ಮುಳುಗಡೆಯ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇಲ್ಲಿದೆ ನೋಡಿ.

ಬಾಗಲಕೋಟೆ, ಆಗಸ್ಟ್ 1: ನೆರೆಯ ಮಹಾರಾಷ್ಟ್ರದ ಪ್ರದೇಶಗಳಲ್ಲಿ ಭಾರ ಮಳೆಯಾಗುತ್ತಿರುವ ಕಾರಣ ಘಟಪ್ರಭಾ ‌ನದಿ ಉಕ್ಕಿಹರಿಯುತ್ತಿದೆ. ಘಟಪ್ರಭಾ ‌ನದಿ ಭೊರ್ಗೆರದು ಹರಿಯುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಧೋಳ ನಗರದ ಬಳಿ ಮುಧೋಳ-ಯಾದವಾಡ ಘಟಪ್ರಭಾ ಸೇತುವೆಯ ಅಕ್ಕಪಕ್ಕದ ಕಬ್ಬು ಬೆಳೆ‌ ಜಲಾವೃತಗೊಂಡಿರುವ ದೃಶ್ಯ ಸೆರೆಯಾಗಿದೆ.

ಮುಳುಗಡೆಯಾಗಿರುವ ಸೇತುವೆ ನೋಡಲು ಸಾವಿರಾರು ಜನ ಜಮಾಯಿಸಿದ್ದಾರೆ.

ಘಟಪ್ರಭಾ ‌ತೀರ ಚಿಕ್ಕೂರು ಗ್ರಾಮದಲ್ಲಿ ಈರುಳ್ಳಿ, ಕಬ್ಬು ಬೆಳೆಗಳು ಮುಳುಗಡೆಯಾಗಿವೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿವೆ. ಈರುಳ್ಳಿ ಹೊಲ ಕೆರೆಯಂತಾಗಿದೆ. ಈರುಳ್ಳಿಯ ಕುರುಹು ಕೂಡ ಕಾಣದಷ್ಟು ಹೊಲ‌ ಮುಳುಗಡೆಯಾಗಿದೆ. ಕಬ್ಬಿನ ಹೊಲದಲ್ಲಿ ಮೂರರಿಂದ ನಾಲ್ಕು ಅಡಿಯಷ್ಟು ನೀರು ನಿಂತಿದೆ. ನದಿಯಿಂದ ಎರಡು ಕಿಲೋಮೀಟರ್​​ಗೂ ಹೆಚ್ಚು ದೂರದ ವರೆಗೆ ನದಿ ನೀರು ವ್ಯಾಪಿಸಿದೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು: ನಡುಗಡ್ಡೆಯಲ್ಲಿರುವವರ ಎದೆಬಡಿತ ಹೆಚ್ಚಳ

ಪ್ರತಿ ಸಾರಿ ಪ್ರವಾಹ ಬಂದಾಗಲೂ ಇದೇ ಗೋಳಾಟ ಆಗಿದೆ. ಇಷ್ಟೆಲ್ಲಾ ಅದರೂ ಯಾರೂ ತಿರುಗಿ ನೋಡಿಲ್ಲ. ಭೂಮಿಗೆ ಶಾಸ್ವತ ಪರಿಹಾರ‌ ನೀಡಿ ಎಂದು‌ ರೈತರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ