ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ

|

Updated on: Dec 21, 2024 | 10:03 AM

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ದೆವ್ವ ಇದೆ, ಲೋಟ-ತಟ್ಟೆ ತಂತಾನೆ ಬೀಳುತ್ತೆ, ಶಬ್ದ ಬರುತ್ತೆ ಎಂದೆಲ್ಲ ಪ್ರತಿ ಸೀಸನ್​ನಲ್ಲೂ ಒಬ್ಬರಲ್ಲ ಒಬ್ಬರು ದೂರುತ್ತಲೇ ಇದ್ದರು. ಆದರೆ ಈಗ ನಿಜಕ್ಕೂ ಬಿಗ್​ಬಾಸ್ ಮನೆ ಸದಸ್ಯರಿಗೆ ದೆವ್ವ ಕಾಣಿಸಿದೆ. ದೆವ್ವ ನೋಡಿದ ಚೈತ್ರಾ ಭಯಕ್ಕೆ ನೆಲದ ಮೇಲೆ ಬಿದ್ದು ಹೊರಳಾಡಿದ್ದಾರೆ. ವಿಡಿಯೋ ನೋಡಿ.

ಬಿಗ್​ಬಾಸ್ ಮನೆಯಲ್ಲಿ ಆಗಾಗ್ಗೆ ಲೋಟ, ತಟ್ಟೆಗಳು ತನ್ನಿಂದ ತಾನೆ ಬೀಳುತ್ತಿರುತ್ತವೆ, ಅಥವಾ ಬಿದ್ದ ತಟ್ಟೆ, ಲೋಟಗಳ ಹಿಂದೆ ಭೂತದ ಕವಾಡ ಇದೆಯೆಂದು ಮನೆಯ ಸದಸ್ಯರು ಆಗಾಗ್ಗೆ ಭಯ ಪಡುತ್ತಿರುತ್ತಾರೆ. ಬಹುತೇಕ ಪ್ರತಿ ಸೀಸನ್​ನಲ್ಲಿಯೂ ಇದು ನಡೆಯುತ್ತಲೇ ಬಂದಿದೆ. ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ನಿಜಕ್ಕೂ ದೆವ್ವವೊಂದು ಕಾಣಿಸಿದೆ. ದೆವ್ವ ನೋಡಿದ ಚೈತ್ರಾ ಅಂತೂ ನೆಲದಲ್ಲಿ ಬಿದ್ದು ಒದ್ದಾಡಿದ್ದಾರೆ. ಮನೆಯ ಎಲ್ಲ ಸದಸ್ಯರಿಗೂ ದೆವ್ವ ಭಾರಿ ಭೀತಿ ತಂದಿದೆ. ಎಲ್ಲರೂ ದೆವ್ವದ ಭಯವದಲ್ಲಿರುವಾಗಲೇ ಬಿಗ್​ಬಾಸ್ ಮನೆಯ ಡೋರು ತೆರೆದು ಕೊಂಡಿದೆ. ಏನಾಗಿದೆ ಬಿಗ್​ಬಾಸ್​ ಮನೆಯಲ್ಲಿ? ವಿಡಿಯೋ ನೋಡಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ