‘ಯಾರೇ ಗೆದ್ರು ಖುಷೀನೆ’; ಅಶ್ವಿನಿ ಹೇಳಿದ್ದ ಕೊನೆಯ ಮಾತು ನನೆಪಿಸಿಕೊಂಡ ಗಿಲ್ಲಿ
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರೋ ಅಶ್ವಿನಿ ಗೌಡ ಅವರು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಗಿಲ್ಲಿ ಗೆಲುವಿಗೆ ಅರ್ಹನಲ್ಲ ಎಂದಿದ್ದರು. ಈಗ ಗಿಲ್ಲಿ ನಟ ಅವರು ಯಾರೇ ಗೆದ್ದರೂ ಖುಷಿ ಎಂದು ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಗಿಲ್ಲಿ ನಟ ಅವರು ಅಶ್ವಿನಿ ಗೌಡ ಬಗ್ಗೆ ಮಾತನಾಡಿದ್ದಾರೆ. ‘ಗಿಲ್ಲಿ ಗೆಲುವಿಗೆ ಅರ್ಹನಲ್ಲ. ಬಡವ ಕಾರ್ಡ್ ಬಳಸಿದ್ದಾನೆ’ ಎಂದು ಅಶ್ವಿನಿ ಹೇಳಿದ್ದರು. ಅಶ್ವಿನಿ ಗೌಡ ಅವರ ಹೇಳಿಕೆ ಬಗ್ಗೆ ಗಿಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಬಿಗ್ ಬಾಸ್ ಫಿನಾಲೆ ವೇಳೆ ನಾನು, ರಕ್ಷಿತಾ ಹಾಗೂ ಅಶ್ವಿನಿ ಇದ್ದೆವು.ಯಾರೇ ಗೆದ್ದರೂ ಖುಷಿನೇ ಎಂದು ಅಶ್ವಿನಿ ಹೇಳಿದ್ದರು. ಈಗ ಅವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ’ ಎಂದಿದ್ದಾರೆ ಗಿಲ್ಲಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 23, 2026 09:00 AM
