AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲೇ ಗೆಲುವಿನ ಸೂಚನೆ ಕೊಟ್ಟಿದ್ದ ಸುದೀಪ್; ಗಿಲ್ಲಿ ಹೇಳಿದ್ದಿಷ್ಟು

ಮೊದಲೇ ಗೆಲುವಿನ ಸೂಚನೆ ಕೊಟ್ಟಿದ್ದ ಸುದೀಪ್; ಗಿಲ್ಲಿ ಹೇಳಿದ್ದಿಷ್ಟು

Malatesh Jaggin
| Edited By: |

Updated on: Jan 23, 2026 | 11:27 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಬಿಗ್ ಬಾಸ್​​ನಿಂದ ಹೊರ ಬಂದ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಹಲವು ವಿಷಯಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಗೆಲ್ಲುವ ಸೂಚನೆ ಅವರಿಗೆ ಮೊದಲೇ ಸಿಕ್ಕಿತ್ತಂತೆ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ವೇದಿಕೆ ಮೇಲಿದ್ದಾಗಲೇ ಸುದೀಪ್ ಸೂಚನೆ ಒಂದನ್ನು ನೀಡಿದ್ದರು. ಈ ಸೂಚನೆ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ. ಬಿಗ್ ಬಾಸ್ ಕೊನೆಯಲ್ಲಿ ಗಿಲ್ಲಿ ಜೊತೆ ಮೂವರು ಮಹಿಳಾ ಸ್ಪರ್ಧಿಗಳೇ ಇದ್ದರು. ‘ಮಹಿಳೆಯರ ಬಸ್ ಹತ್ತಿದಂತೆ ಅನಿಸ್ತಿದೆ’ ಎಂದು ಗಿಲ್ಲಿ ಅವರು ಸುದೀಪ್​​​ಗೆ ಹೇಳಿದ್ದರಂತೆ. ‘ನಿಮ್ಮ ಬಸ್​​ಗೆ ಅವರು ಬಂದಿದ್ದಾರೆ ಎಂದುಕೊಳ್ಳಿ’ ಎಂದು ಸುದೀಪ್ ಹೇಳಿದ್ದು, ಗಿಲ್ಲಿಗೆ ಗೆಲುವಿನ ಸೂಚನೆ ರೀತಿ ಕಾಣಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.