ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ; ಕಾವ್ಯಾ, ಕಾವ್ಯಾ ಎಂದಿದ್ದಕ್ಕೆ ಗಿಲ್ಲಿ ಉತ್ತರ

Edited By:

Updated on: Mar 27, 2026 | 11:11 AM

ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಬಾಂಧವ್ಯ ಬೆಳೆದಿದ್ದು ಬಿಗ್ ಬಾಸ್ ಅಲ್ಲಿ. ಈ ಬಗ್ಗೆ ಕಾವ್ಯಾ ಅವರು ಓಪನ್ ಆಗಿ ಮಾತನಾಡಿಲ್ಲ. ಗಿಲ್ಲಿ ನಟ ಕೌಡ ಮೌನ ವಹಿಸಿದ್ದಾರೆ. ಈಗ ಕಾವ್ಯಾ ಕಾವ್ಯಾ ಎಂದು ಗಿಲ್ಲಿ ನಟ ಅವರ ಬಳಿ ಕೂಗಲಾಗಿದೆ. ಇದಕ್ಕೆ ಕಾರಣವೂ ಇದೆ. ಆ ಸಂದರ್ಭದ ವಿಡಿಯೋ ನೀವೆ ನೋಡಿ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾದ ಕಾವ್ಯಾ ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಾಂಧವ್ಯ ಬಿಗ್ ಬಾಸ್​ ಇಂದ ಹೊರ ಬಂದ ಬಳಿಕವೂ ಮುಂದುವರಿದಿದೆ. ಕಾವ್ಯಾ ಅವರನ್ನು ಗಿಲ್ಲಿ ಮದುವೆ ಆಗಬೇಕು ಎಂದು ಅನೇಕರು ಅಂದುಕೊಂಡಿದ್ದೂ ಇದೆ. ಆದರೆ, ಅದು ಸಾಧ್ಯವಿಲ್ಲ ಎಂಬುದು ಗಿಲ್ಲಿ ಉತ್ತರ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅವರು ಅನೇಕ ಬಾರಿ ಹೇಳಿದ್ದು ಇದೆ. ಹೀಗಿರುವಾಗಲೇ ಗಿಲ್ಲಿ ನಟ ಅವರು ವೇದಿಕೆ ಏರಿದಾಗ ‘ಕಾವ್ಯಾ ಕಾವ್ಯಾ’ ಎಂಬ ಚೀರಾಟ ಕೇಳಿದೆ. ‘ಗೌರಿ ಕಲ್ಯಾಣ’ ಸೀರಿಯಲ್ ಸಂತೆಯಲ್ಲಿ ಈ ಘಟನೆ ನಡೆಯಿತು ಮತ್ತು ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ ಎಂದು ಗಿಲ್ಲಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More