ಭದ್ರಾ ಕಾಲುವೆಗೆ ತಳ್ಳಿ ಯುವತಿ ಕೊಲೆ ; ಸ್ವಾತಿ ತಂದೆ ಬಿಚ್ಚಿಟ್ಟ ಸತ್ಯವೇನು?
ಶಿವಮೊಗ್ಗದ ಭದ್ರಾವತಿಯಲ್ಲಿ ಸ್ವಾತಿ ಎಂಬ ಪದವಿ ವಿದ್ಯಾರ್ಥಿನಿ ಆಕೆಯ ಪ್ರಿಯಕರ ಸೂರ್ಯನ ಕೈಯಿಂದಲೇ ಸಾವನೊಪ್ಪಿದ್ದಾಳೆ. ಭದ್ರಾವತಿ ತಾಲೂಕಿನ ಯಕ್ಕುಂದ ಬಳಿ ಭದ್ರಾ ಕಾಲುವೆಗೆ ನೂಕಿ ಸೂರ್ಯ ಆಕೆಯನ್ನು ಹತ್ಯೆ ಮಾಡಿದ್ದಾನೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೂ ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪದ ಕಾರಣ ಸಿಟ್ಟಿಗೆದ್ದ ಯುವಕ ಈ ಕೃತ್ಯವೆಸಗಿದ್ದಾನೆ.
ಶಿವಮೊಗ್ಗ, ಸೆಪ್ಟೆಂಬರ್ 24: ಭದ್ರಾವತಿಯಲ್ಲಿ ಸ್ವಾತಿ ಎಂಬ ಯುವತಿಯೊಬ್ಬಳು ತನ್ನ ಪ್ರಿಯಕರನ ಕೈಯಿಂದಲೇ ಸಾವನ್ನೊಪ್ಪಿದ್ದಾಳೆ. ಶಿವಮೊಗ್ಗದ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಯುವತಿ ಸ್ವಾತಿ ಮತ್ತು ಆಕೆಯ ಪ್ರಿಯಕರ ಸೂರ್ಯನ ಮದುವೆಗೆ ಕಟುಂಬಸ್ಥರ ವಿರೋಧವಿತ್ತು. ಇದನ್ನು ತಿಳಿದ ಯುವತಿ ಸೂರ್ಯನನ್ನು ದೂರ ಮಾಡಿದ್ದಳು. ಇದೇ ವಿಚಾರಕ್ಕೆ ಸೆ. 21 ರಂದು ಮನೆಯಿಂದ ಕರೆದುಕೊಂಡು ಹೋಗಿದ್ದ ಪ್ರಿಯಕರ ಸೂರ್ಯ, ಭದ್ರಾವತಿ ತಾಲೂಕಿನ ಯಕ್ಕುಂದ ಬಳಿ ಭದ್ರಾ ಕಾಲುವೆಗೆ ತಳ್ಳಿ ಹತ್ಯೆಗೈದಿದ್ದಾನೆ ಎಂಬ ಆರೋಪವಿದೆ. ಈ ಕುರಿತು ಸ್ವಾತಿಯ ತಂದೆ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ವೀಡಿಯೋ ಇಲ್ಲಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

