ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?

Edited By:

Updated on: Nov 20, 2026 | 3:59 PM

ಚಿನ್ನದ ಬೆಲೆ ಇಳಿಕೆಯಾಗಿದ್ದರೂ, ಪ್ರತಿ ಗ್ರಾಂಗೆ 10,000 ರೂ.ಗಿಂತ ಕಡಿಮೆ ಆಗುವುದು ಅಸಂಭವ ಎಂದು ತಜ್ಞರು ಹೇಳಿದ್ದಾರೆ. ಹೂಡಿಕೆದಾರರು ಚಿನ್ನವನ್ನು ಒಂದೇ ಬಾರಿಗೆ ಖರೀದಿಸದೆ, ಹಂತ-ಹಂತವಾಗಿ ಖರೀದಿಸುವ ಮೂಲಕ ದರ ಸರಾಸರಿ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ಪ್ರಸ್ತುತ ಗ್ರಾಹಕರು ಹೆಚ್ಚಿನ ಇಳಿಕೆ ನಿರೀಕ್ಷಿಸುತ್ತಿದ್ದರೂ, ಇದು ಖರೀದಿಗೆ ಉತ್ತಮ ಸಮಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಹೂಡಿಕೆದಾರರಲ್ಲಿ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಮನೆಮಾಡಿದೆ. ಆದರೆ, ಹೂಡಿಕೆ ತಜ್ಞರ ಪ್ರಕಾರ, ಚಿನ್ನದ ಬೆಲೆ ಪ್ರತಿ ಗ್ರಾಂಗೆ 10,000 ರೂಪಾಯಿಗಳಿಗಿಂತ ಕಡಿಮೆ ಆಗುವುದು ಅಸಂಭವ. ಸದ್ಯದ ಮಾರುಕಟ್ಟೆ ಪರಿಸ್ಥಿತಿ “ಬಾಟಮ್ಡ್ ಔಟ್” ಆಗಿದ್ದು, ಅಕಸ್ಮಾತ್ ಇಳಿಕೆಯಾದರೂ, ಪ್ರತಿ ಗ್ರಾಂಗೆ 200-300 ರೂಪಾಯಿಗಳಷ್ಟು ಮಾತ್ರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಳ್ಳಿಯ ಬೆಲೆ 5,000-10,000 ರೂಪಾಯಿಗಳಷ್ಟು ಇಳಿಕೆಯಾಗಬಹುದು. ತಜ್ಞರು ನೀಡುವ ಪ್ರಮುಖ ಸಲಹೆ ಏನೆಂದರೆ, ಹೂಡಿಕೆದಾರರು ಚಿನ್ನವನ್ನು ಒಂದೇ ಬಾರಿಗೆ ಖರೀದಿಸದೆ, ಹಂತ-ಹಂತವಾಗಿ ಖರೀದಿಸಬೇಕು. ಉದಾಹರಣೆಗೆ, 100 ಗ್ರಾಂ ಚಿನ್ನ ಖರೀದಿಸುವ ಉದ್ದೇಶವಿದ್ದರೆ, 50 ಗ್ರಾಂ ಈಗ, 25 ಗ್ರಾಂ ಡಿಸೆಂಬರ್‌ನಲ್ಲಿ ಮತ್ತು ಉಳಿದ 25 ಗ್ರಾಂ ಜನವರಿಯಲ್ಲಿ ಖರೀದಿಸುವುದು ಉತ್ತಮ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Loading...
Unable to load recommendations.
Follow Us
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More