ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ? ಸಂಶೋಧಕ ಅಪ್ಪಣ್ಣ ಏನು ಹೇಳುತ್ತಾರೆ ನೋಡಿ

Updated on: Jan 11, 2026 | 1:18 PM

ಐತಿಹಾಸಿಕ ಹಿನ್ನೆಲೆಯ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಿಧಿಯ ಬಗ್ಗೆ ಸಂಶೋಧಕ ಅಪ್ಪಣ್ಣ ಹಂಜೆ ಮಹತ್ವದ ಮಾಹಿತಿ ನೀಡಿದ್ದು, ಈ ಚಿನ್ನಾಭರಣಗಳು ಸುಮಾರು 11 ಅಥವಾ 12ನೇ ಶತಮಾನಕ್ಕೆ ಸಂಬಂಧಿಸಿವೆ ಎಂದು ಹೇಳಿದ್ದಾರೆ. ಲಕ್ಕುಂಡಿಯಲ್ಲಿ ದೊರೆತ ಈ ಅಭರಣಗಳ ಸ್ವರೂಪವನ್ನು ಪರಿಶೀಲಿಸಿದಾಗ, ಅವು ಅರಸು ಮನೆತನ ಅಥವಾ ಉನ್ನತ ವರ್ಗಕ್ಕೆ ಸೇರಿದವುಗಳಾಗಿರದೆ, ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬರು ಸುರಕ್ಷತೆಗಾಗಿ ಸಂರಕ್ಷಿಸಿಟ್ಟಿದ್ದಾಗಿ ಕಂಡುಬರುತ್ತದೆ. ಲಕ್ಕುಂಡಿಯ ಹಿಂದಿನ ಸಮೃದ್ಧ ಇತಿಹಾಸ, ಅಲ್ಲಿ ಸಿಕ್ಕಿರುವ 150ಕ್ಕೂ ಹೆಚ್ಚು ಶಾಸನಗಳು, ದೇವಾಲಯಗಳು ಹಾಗೂ ಪುರಾತತ್ವ ಅವಶೇಷಗಳು ಈ ಪ್ರದೇಶದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಈ ನಿಧಿ ಆ ಪ್ರಾಚೀನ ಕಾಲದ ಜೀವನಶೈಲಿ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ ಎಂದು ಸಂಶೋಧಕ ತಿಳಿಸಿದ್ದಾರೆ.

ಗದಗ, ಜನವರಿ 11:  ಐತಿಹಾಸಿಕ ಹಿನ್ನೆಲೆಯ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಿಧಿಯ ಬಗ್ಗೆ ಸಂಶೋಧಕ ಅಪ್ಪಣ್ಣ ಹಂಜೆ ಮಹತ್ವದ ಮಾಹಿತಿ ನೀಡಿದ್ದು, ಈ ಚಿನ್ನಾಭರಣಗಳು ಸುಮಾರು 11 ಅಥವಾ 12ನೇ ಶತಮಾನಕ್ಕೆ ಸಂಬಂಧಿಸಿವೆ ಎಂದು ಹೇಳಿದ್ದಾರೆ. ಲಕ್ಕುಂಡಿಯಲ್ಲಿ ದೊರೆತ ಈ ಅಭರಣಗಳ ಸ್ವರೂಪವನ್ನು ಪರಿಶೀಲಿಸಿದಾಗ, ಅವು ಅರಸು ಮನೆತನ ಅಥವಾ ಉನ್ನತ ವರ್ಗಕ್ಕೆ ಸೇರಿದವುಗಳಾಗಿರದೆ, ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬರು ಸುರಕ್ಷತೆಗಾಗಿ ಸಂರಕ್ಷಿಸಿಟ್ಟಿದ್ದಾಗಿ ಕಂಡುಬರುತ್ತದೆ. ಲಕ್ಕುಂಡಿಯ ಹಿಂದಿನ ಸಮೃದ್ಧ ಇತಿಹಾಸ, ಅಲ್ಲಿ ಸಿಕ್ಕಿರುವ 150ಕ್ಕೂ ಹೆಚ್ಚು ಶಾಸನಗಳು, ದೇವಾಲಯಗಳು ಹಾಗೂ ಪುರಾತತ್ವ ಅವಶೇಷಗಳು ಈ ಪ್ರದೇಶದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಈ ನಿಧಿ ಆ ಪ್ರಾಚೀನ ಕಾಲದ ಜೀವನಶೈಲಿ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ ಎಂದು ಸಂಶೋಧಕ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.