ಗೋಲ್ಡನ್ ಮೆಗಾ ಸ್ಟಾರ್ ಆದ ಗಣೇಶ್; ‘ಪಿನಾಕ’ ವೇದಿಕೆಯಲ್ಲಿ ಸಾಧು ಕೋಕಿಲ ಹೇಳಿದ್ದೇನು?

Updated on: Jul 06, 2026 | 9:45 PM

ಸಾಧು ಕೋಕಿಲ ಹಾಗೂ ಗಣೇಶ್ ನಡುವೆ ಹಲವು ವರ್ಷಗಳ ನಂಟು ಇದೆ. ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆ ವೇದಿಕೆಯಲ್ಲಿ ಗಣೇಶ್ ಬಗ್ಗೆ ಸಾಧು ಕೋಕಿಲ ಮಾತನಾಡಿದರು. ಪ್ಯಾನ್ ಇಂಡಿಯಾ ಮಟ್ಟದ ಚಿತ್ರದಲ್ಲಿ ಕೂಡ ಸಾಧು ಕೋಕಿಲ, ರಂಗಾಯಣ ರಘು ಮುಂತಾದ ನಟರಿಗೆ ಅವಕಾಶ ಸಿಗುವಂತೆ ಗಣೇಶ್ ನೋಡಿಕೊಂಡಿದ್ದಾರೆ.

ಸಾಧು ಕೋಕಿಲ ಮತ್ತು ಗಣೇಶ್ (Golden Star Ganesh) ನಡುವೆ ಹಲವು ವರ್ಷಗಳ ನಂಟು ಇದೆ. ‘ಪಿನಾಕ’ ಸಿನಿಮಾದ ಟೀಸರ್ ಲಾಂಚ್ ವೇದಿಕೆಯಲ್ಲಿ ಗಣೇಶ್ ಬಗ್ಗೆ ಸಾಧು ಕೋಕಿಲ ಮಾತನಾಡಿದರು. ಈ ಚಿತ್ರದಲ್ಲಿ ಗಣೇಶ್ ಅವರನ್ನು ‘ಗೋಲ್ಡನ್ ಮೆಗಾ ಸ್ಟಾರ್’ ಎಂದು ಕರೆಯಲಾಗಿದೆ. ಇದರಿಂದ ಸಾಧು ಕೋಕಿಲ ಅವರಿಗೆ ಹೆಚ್ಚು ಖುಷಿ ಆಗಿದೆ. ಹಳೆಯ ಕಲಾವಿದರನ್ನು ಗಣೇಶ್ ಅವರು ಮರೆತಿಲ್ಲ. ಪ್ಯಾನ್ ಇಂಡಿಯಾ ಮಟ್ಟದ ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು ಮುಂತಾದ ನಟರಿಗೆ ಅವಕಾಶ ಸಿಗುವಂತೆ ಗಣೇಶ್ ನೋಡಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಸಾಧು ಕೋಕಿಲ ಅವರು ಗಣೇಶ್ ಅವರ ವ್ಯಕ್ತಿತ್ವವನ್ನು ಹೊಗಳಿದರು. ವೇದಿಕೆಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ. ‘ಪಿನಾಕ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಟೀಸರ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More