AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು

ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು

ಮದನ್​ ಕುಮಾರ್​
|

Updated on: Jun 30, 2026 | 10:25 PM

Share

ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ‘ಪಿಕ್ಚರ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಿನಿಮಾದ ಹಾಡಿಗೆ ಶಿಲ್ಪಾ ಗಣೇಶ್ ಅವರು ಧ್ವನಿ ನೀಡಿದ್ದಾರೆ. ಆ ಹಾಡು ಬಿಡುಗಡೆ ಈಗಾಗಲೇ ಬಿಡುಗಡೆ ಆಗಿದೆ. ಜುಲೈ 24ರಂದು ‘ಪಿಕ್ಚರ್’ ಸಿನಿಮಾ ರಿಲೀಸ್ ಆಗಲಿದೆ. ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ..

ನಟ ಗಣೇಶ್ (Golden Star Ganesh) ಅವರು ‘ಪಿಕ್ಚರ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಇಂದು ನಮ್ಮ ಪ್ರೊಡಕ್ಷನ್ ಸಿನಿಮಾದ ಸುದ್ದಿಗೋಷ್ಠಿಗೆ ಬಂದಿದ್ದೇನೆ. ಒಳ್ಳೆಯ ಕಥೆ ಸಿಕ್ಕರೆ ತುಳು-ಕನ್ನಡ ಸಿನಿಮಾ ಮಾಡೋಣ ಅಂದುಕೊಂಡಿದ್ದೆ. ಆಪ್ತರಿಂದ ಈ ಕಥೆ ಬಗ್ಗೆ ತಿಳಿಯಿತು. ಈ ಕಥೆಯಲ್ಲಿ ಕೌಟುಂಬಿಕ ಅಂಶ ಇದೆ. ಹಾಸ್ಯವೂ ಇದೆ. ಬಜೆಟ್ ಜಾಸ್ತಿ ಬೇಕು ಅಂತ ನನಗೆ ಮೊದಲೇ ಅನಿಸಿತು. ಹಾಗಾಗಿ ಎರಡು ಭಾಷೆಯಲ್ಲಿ ಮಾಡಲು ನಿರ್ಧರಿಸಿದೆವು. ಎಲ್ಲರೂ ಪ್ರೀತಿಯಿಂದ ಸಿನಿಮಾದ ಕೆಲಸ ಮಾಡಿಕೊಟ್ಟರು’ ಎಂದು ಗಣೇಶ್ ಹೇಳಿದರು. ಈ ಚಿತ್ರದಲ್ಲಿ ಗಣೇಶ್ ಪತ್ನಿ ಶಿಲ್ಪಾ ಅವರು ಹಾಡಿದ್ದಾರೆ. ‘ಒಬ್ಬರು ಅದ್ಭುತ ಗಾಯಕಿಯನ್ನು ನಾವು ಈ ಸಿನಿಮಾದಲ್ಲಿ ಪರಿಚಯಿಸಿದ್ದೇವೆ. ತುಂಬಾ ಚೆನ್ನಾಗಿ ಹಾಡಿದ್ದಾರೆ. ಮನೆಯಲ್ಲಿ ಅವರ ಎಲ್ಲ ರಾಗಗಳನ್ನು ಕೇಳಿಸಿಕೊಂಡಿದ್ದೇನೆ’ ಎಂದು ಗಣೇಶ್ ಹೇಳುತ್ತಿದ್ದಂತೆಯೇ ಶಿಲ್ಪಾ ನಕ್ಕರು. ಜುಲೈ 24ರಂದು ಈ ಸಿನಿಮಾ ರಿಲೀಸ್ ಆಗಲಿದೆ ಎಂದು ಗಣೇಶ್ ಮಾಹಿತಿ ಹಂಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us