Sakaleshpur: ಪ್ರವಾಸಿಗರಿಗೆ ಗುಡ್ ನ್ಯೂಸ್; ಸಕಲೇಶಪುರದಲ್ಲಿ ಇಂದಿನಿಂದ ಪ್ಯಾರಾಗ್ಲೈಡಿಂಗ್ ಶುರು
ಅರಣ್ಯ ಇಲಾಖೆಯಿಂದ ಇಂದಿನಿಂದ ಸಕಲೇಶಪುರದಲ್ಲಿ ಪ್ಯಾರಾ ಗ್ಲೈಡಿಂಗ್ ಆರಂಭಿಸಲಾಗಿದೆ. ಸಕಲೇಶಪುರದ ತಾಣಗಳಲ್ಲಿ ರೋಮಾಂಚನಕಾರಿ ಫ್ಲೈಯಿಂಗ್ ಮಾಡಲು, ಬೆಟ್ಟಗುಡ್ಡಗಳ ಸಾಲಿನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವವರು ಸಕಲೇಶಪುರಕ್ಕೆ ತೆರಳಬಹುದು.
ಹಾಸನ (Hassan) ಅರೆ ಮಲೆನಾಡಿನ ಸುಂದರವಾದ ಜಿಲ್ಲೆ. ನೀವೇನಾದರೂ ವೀಕೆಂಡ್ನಲ್ಲಿ ಹತ್ತಿರದಲ್ಲೇ ಯಾವುದಾದರೂ ಸುಂದರವಾದ ಸ್ಥಳಕ್ಕೆ ಪ್ರವಾಸ ಮಾಡಬೇಕೆಂದುಕೊಂಡಿದ್ದರೆ ಸಕಲೇಶಪುರ (Sakaleshpur) ಅದಕ್ಕೆ ಹೇಳಿ ಮಾಡಿಸಿದ ಜಾಗ. ಪ್ರಕೃತಿಯ ರಮಣೀಯ ತಾಣವಾದ ಸಕಲೇಶಪುರದಲ್ಲಿ ಈಗ ಪ್ಯಾರಾಗ್ಲೈಡಿಂಗ್ (Paragliding) ಆರಂಭವಾಗಿದೆ. ಅರಣ್ಯ ಇಲಾಖೆಯಿಂದ ಇಂದಿನಿಂದ ಸಕಲೇಶಪುರದಲ್ಲಿ ಪ್ಯಾರಾ ಗ್ಲೈಡಿಂಗ್ ಆರಂಭಿಸಲಾಗಿದೆ. ಸಕಲೇಶಪುರದ ತಾಣಗಳಲ್ಲಿ ರೋಮಾಂಚನಕಾರಿ ಫ್ಲೈಯಿಂಗ್ ಮಾಡಲು, ಸಕಲೇಶಪುರ ತಾಲ್ಲೂಕಿನ ಬೆಟ್ಟಗುಡ್ಡಗಳ ಸಾಲಿನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಲು ಈಗ ಪ್ರವಾಸಿಗರಿಗೆ ಸುವರ್ಣಾವಕಾಶ ಒದಗಿದೆ. ಹಚ್ಚ ಹಸಿರಿನ ಗಿರಿ ಕಾನನಗಳ ಮೇಲೆ ಪ್ರವಾಸಿಗರು ಹಾರಾಟ ನಡೆಸಬಹುದಾಗಿದೆ.
Latest Videos