ಜನಸಾಮಾನ್ಯನಾಗಿ ಬದುಕುವುದರಲ್ಲಿರುವ ಸುಖ, ನೆಮ್ಮದಿ ಶ್ರೀಮಂತಿಕೆಯಲ್ಲಿ ಇಲ್ಲ: ಕೆಜಿಎಫ್ ಬಾಬು

Updated on: Jul 18, 2025 | 8:46 PM

ಬಾಬು 2013ರಲ್ಲಿ ಎರಡನೇ ಮದುವೆಯಾದಾಗ ಮೊದಲ ಹೆಂಡತಿ ತನ್ನ ತವರು ಮನೆಯವರ ಜೊತೆಗೂಡಿ ₹700 ಕೋಟಿಗೆ ಕೌಟುಂಬಿಕ ಹಿಂಸೆಯ ಕೇಸ್ ಹಾಕಿದ್ದರಂತೆ! ಅಕೆಯ ಮನೆ ಕಡೆಯವರಿಂದಲೂ ಸಾಕಷ್ಟು ಕಿರುಕುಳ ಅನುಭವಿಸಿದ್ದೇನೆ ಎಂದು ಬಾಬು ಹೇಳುತ್ತಾರೆ. ಹೊರಗಿನವರಿಂದ ತಾನು ಯಾವುದೇ ತೊಂದರೆ ಅನುಭವಿಸಿಲ್ಲ, ಕುಟುಂಬಸ್ಥರು, ಹೆಂಡತಿಯ ಸಂಬಂಧಿಕರಿಂದ ಅಪಾರ ನೋವು ಅನುಭವಿಸಿದ್ದೇನೆ ಎಂದು ಅವರು ಹೇಳುತ್ತಾರೆ.

ಬೆಂಗಳೂರು, ಜುಲೈ 18: ರ‍್ಯಾಗ್ಸ್ ಟು ರಿಚಸ್ ಉಕ್ತಿಯ ಪ್ರತೀಕವೆಂಬಂತಿರುವ ರೀಯಲ್ಟರ್ ಕೆಜಿಎಫ್ ಬಾಬು ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಬದುಕಿನ ಹಲವಾರು ಆಯಾಮಗಳ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಈಡಿಯಿಂದ ಇವರ ವಿಚಾರಣೆ ನಡೆದ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ವಿಚಾರಣೆಯೂ ನಡೆಯುತ್ತಿತ್ತಂತೆ. ಈಡಿ ಅಧಿಕಾರಿಗಳು ಆಜ್ ತೇರಿ ಬಾರಿ ಕಲ್ ತೇರೆ ಬಾಸ್​ ಕೀ ಬಾರಿ ಎಂದು ಛೇಡಿಸಿದ್ದರಂತೆ. ಜಾರಿ ನಿರ್ದೇಶನಾಲಯ ತನ್ನ ಮನೆಯ ಮೇಲೆ ದಾಳಿ ನಡೆಸಿದಾಗ ಅವರಿಗೆ ಸಿಕ್ಕಿದ್ದು ಕೇವಲ ₹54,000 ಮಾತ್ರ ಅಂತ ಬಾಬು ಹೇಳುತ್ತಾರೆ. ಬ್ಯಾಂಕಲ್ಲಿ ₹11 ಕೋಟಿ ಮತ್ತು ಮತ್ತು ಮನೇಲಿದ್ದ ₹3ಕೋಟಿ ಒಡವೆಗಳನ್ನ ಅವರು ಜಪ್ತಿ ಮಾಡಿಕೊಂಡು ಹೋಗಿದ್ದಾರೆ, ಇನ್ನೂ ವಾಪಸ್ಸು ಕೊಟ್ಟಿಲ್ಲ ದೆಹಲಿ ಹೈಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ ಎಂದು ಹೇಳುವ ಬಾಬು ಶ್ರೀಮಂತನಾಗಿರುವುದರಲ್ಲಿ ಯಾವ ಸುಖವೂ ಇಲ್ಲ, ಜನ ಸಾಮಾನ್ಯನಂತೆ ಬದುಕುವುದರಲ್ಲಿ, ಸ್ಲಂನಲ್ಲಿ ಬಹಳ ಸಂತೋಷ ಅಡಗಿದೆ ಎನ್ನುತ್ತಾರೆ.

ಇದನ್ನೂ ಓದಿ:  ತನ್ನ ಮಗ ಮತ್ತು ಅವನ ಮಾವ ಮುಸ್ತಾಫಾ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಅಂತ ವಿವರಿಸಿದ ಕೆಜಿಎಫ್ ಬಾಬು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 18, 2025 08:45 PM