ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಪೋನ್ಗಳು ಭಾರತ ಬಿಟ್ಟು ವಿಶ್ವದ 8 ಪ್ರಾಂತ್ಯಗಳಲ್ಲಿ ಲಾಂಚ್ ಆಗಿವೆ!
ಫೋನಲ್ಲಿ ಅಳವಡಿಸಿರುವ ಕೆಮರಾಗಳ ಬಗ್ಗೆ ಗೂಗಲ್ ಯಾಕೆ ಕೊಚ್ಚಿಕೊಳ್ಳುತ್ತಿದೆಯೆಂದರೆ, ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಫೋನ್ಗಳಲ್ಲಿ 50 ಮೆಗಾ ಪಿಕ್ಸೆಲ್ ಮೇನ್ ಇದ್ದು 12 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಕೆಮೆರಾಗಳಿವೆ.
ಗೂಗಲ್ ಸಂಸ್ಥೆಯು ತನ್ನ ಎರಡು ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಫೋನ್ಗಳನ್ನು ಗ್ಲೋಬಲ್ ಲಾಂಚ್ ಮಾಡಿದೆ. ಇವೆರಡು ಫೋನ್ಗಳು ಆಪಲ್ ಮತ್ತಯ ಸ್ಯಾಮ್ಸಂಗ್ ಸಂಸ್ಥೆಗಳ ಪೋನ್ಗಳೊಂದಿಗೆ ನೇರಾನೇರ ಜಿದ್ದಿಗೆ ಬೀಳಲಿವೆ. ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಅತ್ಯುತ್ತಮವಾದ ಕೆಮೆರಾಗಳನ್ನು ಹೊಂದಿವೆ ಎಂದು ಗೂಗಲ್ ಹೇಳಿಕೊಂಡಿದೆ. ವಿಷಾದದ ಸಂಗತಿಯೆಂದರೆ, ಪಿಕ್ಸಲ್ 6 ಮತ್ತು ಪಿಕ್ಸೆಲ್ 6 ಪ್ರೋ ಭಾರತದಲ್ಲಿ ಕೂಡಲೇ ಲಭ್ಯವಾಗಲಾರವು. ಭಾರತದಲ್ಲಿ ಯಾವಾಗ ಬಿಡುಗಡೆ ಮಾಡಲಾವುದು ಅನ್ನವುದನ್ನು ಸಹ ಗೂಗಲ್ ಬಹಿರಂಗಪಡಿಸಿಲ್ಲ.
ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಫೋನ್ಗಳನ್ನು ಗೂಗಲ್ ವಿಶ್ವದ ಕೇವಲ 8 ಪ್ರಾಂತ್ಯಗಳಲ್ಲಿ ಮಾತ್ರ ತನ್ನ ಉತ್ಪಾದನೆಗಳನ್ನು ಮಾರಾಟ ಮಾಡಲಾಗುವುದೆಂದು ಹೇಳಿದೆ. ಅಮೇರಿಕ, ಆಸ್ಟ್ರೇಲಿಯ, ಕೆನೆಡ, ಫ್ರಾನ್ಸ್, ಯುನೈಟೆಡ್ ಕಿಂಗ್ ಡಮ್, ಜರ್ಮಿನಿ ಮತ್ತು ತೈವಾನ್ ಈ ದೇಶಗಳಲ್ಲಿ ಮಾತ್ರ ಫೋನ್ಗಳನ್ನು ಲಾಂಚ್ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಭಾರತದ ಹೆಸರಿಲ್ಲದಿರುವುದು ಟೀಮ್ ಇಂಡಿಯನಲ್ಲಿ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡದೆ ಹೋದಾಗ ಆಗುವಷ್ಟೇ ಆಘಾತವಾಗುತ್ತದೆ. ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಫೋನ್ಗಳನ್ನು ಬೇಗ ಲಾಂಚ್ ಮಾಡುವ ಇರಾದೆಯೇನೂ ಇಲ್ಲವೆಂದು ಹೇಳಿಕೆಯೊಂದರಲ್ಲಿ ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ಲಾಂಚ್ ಮಾಡಲು ಆಗದಿರವುದಕ್ಕೆ ಹಲವಾರು ಕಾರಣಗಳನ್ನು ಗೂಗಲ್ ನೀಡಿದ್ದು ಜಾಗತಿಕ ಸರಬರಾಜು ಚೇನ್ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಉಲ್ಲೇಖಿಸಿದೆ. ಹಲವಾರು ಉದ್ದಿಮೆಗಳೊಂದಿಗೆ ಮೊಬೈಲ್ ಫೋನ್ ತಯಾರಿಕೆ ಕಂಪನಿಗಳು ಕೂಡ ಸೆಮಿಕಂಡಕ್ಟರ್ ಗಳ ತೀವ್ರ ಕೊರತೆ ಅನುಭವಿಸುತ್ತಿರುವುದದೂ ಒಂದು ಕಾರಣವೆಂದು ಹೇಳಲಾಗುತ್ತಿದೆ.
ಫೋನಲ್ಲಿ ಅಳವಡಿಸಿರುವ ಕೆಮರಾಗಳ ಬಗ್ಗೆ ಗೂಗಲ್ ಯಾಕೆ ಕೊಚ್ಚಿಕೊಳ್ಳುತ್ತಿದೆಯೆಂದರೆ, ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಫೋನ್ಗಳಲ್ಲಿ 50 ಮೆಗಾ ಪಿಕ್ಸೆಲ್ ಮೇನ್ ಇದ್ದು 12 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಕೆಮೆರಾಗಳಿವೆ. ಇವುಗಳೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫೀ ಮತ್ತು 11 ಮೆಗಾಪಿಕ್ಸೆಲ್ ಶೂಟರ್ ಕೆಮೆರಾಗಳಿವೆ.
ಅಂದಹಾಗೆ, ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಭಾರತದಲ್ಲಿ ಲಾಂಚ್ ಆದ ಬಳಿಕ ಕ್ರಮವಾಗಿ ರೂ. 45,000 ಗಳಿಂದ ರೂ 52,500 ಮತ್ತು ರೂ. 67,000 ದಿಂದ 82,500 ಗಳಿಗೆ ಸಿಗಲಿವೆ.
ಇದನ್ನೂ ಓದಿ: Shilpa Shetty: ಪತಿ ರಾಜ್ ಕುಂದ್ರಾ ಚಿಂತೆ ಮರೆತು ಬಿಂದಾಸ್ ಆಗಿ ಕುಣಿದು ಕುಪ್ಪಳಿಸಿದ ನಟಿ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್