ಕರಾವಳಿ ಪ್ರಾಂತ್ಯದ ಜನ ವಲಸೆ ಹೋಗುವುದನ್ನು ತಡೆಗಟ್ಟಲು ಸರ್ಕಾರ ಬದ್ಧವಾಗಿದೆ: ಡಿಕೆ ಶಿವಕುಮಾರ್
ಸರ್ಕಾರದ ಉಳಿವಿನ ಬಗ್ಗೆ ಬೇಸರದಲ್ಲಿ ಮಾತಾಡಿ ಕಾಂಗ್ರೆಸ್ ಕಚೇರಿಗಳನ್ನು ಬೇಗ ಕಟ್ಟಿಕೊಳ್ಳುವಂತೆ ಕಾರ್ಯಕರ್ತರಿಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಗಾಂದೀಜಿಯವರು ಕಾಂಗ್ರೆಸ್ ನಾಯಕತ್ವವಹಿಸಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ನೂರು ಕಾಂಗ್ರೆಸ್ ಕಚೇರಿಗಳನ್ನು ಕಟ್ಟುವ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ವಹಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಕಾರವಾರ: ತಮ್ಮ ಸರ್ಕಾರ ಕರಾವಳಿ ಪ್ರಾಂತ್ಯದ ಜನರ ಅಭ್ಯುದಯಕ್ಕೆ ಬದ್ಧವಾಗಿದೆ, ಜನ ಗುಳೆ ಹೋಗುವುದನ್ನು ತಡೆಗಟ್ಟಲು ಸರ್ಕಾರದಿಂದ ಎಲ್ಲ ಪ್ರಯತ್ನ ನಡೆದಿವೆ, ಈ ಭಾಗದ ಜನ ವಿದ್ಯಾವಂತರು ಮತ್ತು ಬುದ್ಧಿವಂತರು, ಬದುಕು ಕಟ್ಟಿಕೊಳ್ಳಲು ಅವರಿಗೆ ಇಲ್ಲೇ ಬೇಕಾದಷ್ಟು ಅವಕಾಶಗಳಿವೆ, ಪ್ರಾಕೃತಿಕ ಸಂಪತ್ತಿದೆ ಮತ್ತು ಸರ್ಕಾರ ಕರಾವಳಿ ಪ್ರಾಂತ್ಯಕ್ಕೆಂದೇ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದೆ, ಹಾಗಾಗಿ ಕರಾವಳಿ ಜನ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕಾಗಿ ಬೈಂದೂರಿಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಡಿಕೆ ಶಿವಕುಮಾರ್