ಬಡವರಿಗೆ ವಿತರಣೆಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ಕಾಗಿಣಾ ನದಿಯಲ್ಲಿ ಪತ್ತೆ
ಬಡವರಿಗೆ ವಿತರಿಸಬೇಕಾಗಿದ್ದ ಸರ್ಕಾರಿ ಆಸ್ಪತ್ರೆಯ ಔಷಧಿ ಮಾತ್ರೆಗಳು ಮತ್ತು ಸಿರಪ್‌ಗಳು ಕಲಬುರಗಿಯ ಕಾಗಿಣಾ ನದಿಯಲ್ಲಿ ಪತ್ತೆಯಾಗಿವೆ. ಮೆಟ್‌ಫಾರ್ಮಿನ್, ಟೆಲ್ಮಿಸಾರ್ಟನ್ ಮತ್ತು ಮಕ್ಕಳ ಅಪೌಷ್ಟಿಕತೆಗೆ ನೀಡುವ ಸಿರಪ್‌ಗಳು ನದಿ ಪಾಲಾಗಿರುವುದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದ್ದ ಔಷಧಿಗಳನ್ನು ಹೀಗೆ ಎಸೆಯುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕಲಬುರಗಿ, ನವೆಂಬರ್ 20: ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಮತ್ತು ಸಿರಪ್‌ಗಳು ಶಹಬಾದ್-ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿ 150ರ ಬಳಿಯ ಕಾಗಿಣಾ ನದಿ ಸೇತುವೆ ಕೆಳಗೆ ಪತ್ತೆಯಾಗಿವೆ. ಬಡವರಿಗೆ ತಲುಪಬೇಕಾದ ಔಷಧ ನದಿ ಪಾಲಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ನಿಯಮಗಳ ಪ್ರಕಾರ ಅವಧಿ ಮೀರಿದ ಮಾತ್ರೆ , ಸಿರಪ್ಗಳನ್ನೂ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಔಷಧಿಗಳನ್ನು ಈ ರೀತಿ ನದಿ ಪಾತ್ರದಲ್ಲಿ ಎಸೆದವರ ವಿರುದ್ಧ ಕಠಿಣ ಕ್ರಮವಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
