ಸರ್ಕಾರ ಹಿಂಪಡೆಯ ಬಯಸಿದ್ದು ರೈತರ ಕೇಸ್​ಗಳಲ್ಲ, ಠಾಣೆಗೆ ಕೊಳ್ಳಿಯಿಡುವವರ ಕೇಸ್​ಗಳು: ಸಿಟಿ ರವಿ

Updated on: May 29, 2025 | 5:49 PM

ಹಿಂದೂ ಕಾರ್ಯಕರ್ತನೊಬ್ಬನ ಕೊಲೆಯಾದರೆ ಅವನು ರೌಡಿಶೀಟರ್ ಅಗಿದ್ದ, ಹಾಗಾಗಿ ಅವನ ಮನೆಗೆ ಹೋಗಲ್ಲ ಎನ್ನುವ ಕಾಂಗ್ರೆಸ್ ನಾಯಕರಿಗೆ ಹಿಂದೂಯೇತರ ವ್ಯಕ್ತಿಯ ಕೊಲೆ ನಡೆದರೆ ಕರಳಿ ಕಿತ್ತು ಬಂದಾಗುತ್ತದೆ. ಇವರ ಸಂವೇದನೆಗಳು ನಮಗೆ ಅರ್ಥವಾಗುತ್ತವೆ, ಸರ್ಕಾರದ ಕ್ಯಾಬಿನೆಟ್ ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಆ್ಯಂಟಿ ಕಮ್ಯೂನಲ್ ಫೋರ್ಸ್​ ತರಲಿ ಎಂದು ರವಿ ಹೇಳಿದರು.

ಬೆಂಗಳೂರು, ಮೇ 29: ಕಾಂಗ್ರೆಸ್ ಸರ್ಕಾರ ತನ್ನ ವೋಟ್ ಬ್ಯಾಂಕ್ ರಾಜಕಾರಣ (vote bank politics) ನಿಲ್ಲಿಸಲ್ಲ, ಪೊಲೀಸ್ ಠಾಣೆ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನು ಹಿಂಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದ ಸರ್ಕಾರಕ್ಕೆ ಉಚ್ಚ ನ್ಯಾಯಾಲಯ ಛೀಮಾರಿ ಹಾಕಿರೋದು ಸಮಯೋಚಿತವಾಗಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದರು. ಸರ್ಕಾರ ಹಿಂಪಡೆಯಲು ಬಯಸಿರುವ ಪ್ರಕರಣಗಳು ಕನ್ನಡ ಪರ ಹೋರಾಟಗಾರರು ಅಥವಾ ರೈತರಿಗೆ ಸಂಬಂಧಿಸಿದವುಗಳಲ್ಲ, ಪೊಲೀಸ್ ಠಾಣೆಗೆ ಕೊಳ್ಳಿಯಿಡಲು ಪ್ರಯತ್ನಿಸಿದವರ ಪ್ರಕರಣಗಳವು, ಸರ್ಕಾರ ಆ್ಯಂಟಿ ಕಮ್ಯೂನಲ್ ದಳ ರಚಿಸುವುದಾಗಿ ಹೇಳೋದ್ರಲ್ಲಿ ಅರ್ಥವಿಲ್ಲ, ಒಂದೆಡೆ ಹಾಗೆ ಹೇಳೋದು ಮತ್ತೊಂದೆಡೆ ಕಮ್ಯೂನಲ್ ಶಕ್ತಿಗಳಿಗೆ ಕುಮ್ಮಕ್ಕು ನೀಡೋದು ಎಂದು ರವಿ ಛೇಡಿಸಿದರು.

ಇದನ್ನೂ ಓದಿ:  ಸುಹಾಸ್ ಹತ್ಯೆಕೋರರನ್ನು ಸುಮ್ಮನೆ ಬಿಡುವ ಮಾನಸಿಕತೆ ಯಾರಲ್ಲೂ ಇಲ್ಲ: ಸಿಟಿ ರವಿ ಎಚ್ಚರಿಕೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ