GPS ಎಡವಟ್ಟು: ನೌಕಾನೆಲೆಗೆ ನುಗ್ಗಿದ ತಮಿಳುನಾಡಿನ ಮೀನುಗಾರಿಕಾ ಬೋಟ್
ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈಕ್ಕೋಲ್ ನೌಕಾನೆಲೆಗೆ ದಾರಿ ತಪ್ಪಿ ಬಂದ ತಮಿಳುನಾಡಿನ ಮೀನುಗಾರಿಕಾ ಬೋಟ್ನ್ನು ನೌಕಾಪಡೆ ವಶಕ್ಕೆ ಪಡೆದುಕೊಂಡಿದೆ. ಬೋಟ್ನಲ್ಲಿ ಐಸ್ ಖಾಲಿಯಾಗದ ಹಿನ್ನೆಲೆ ಬೋಟ್ ಬಂದರಿಗೆ ಬರಬೇಕಿತ್ತು. ಆದರೆ ಮೀನುಗಾರಿಕಾ ಬಂದರಿಗೆ ಬರುವ ಬದಲು ನೌಕಾನೆಲೆಗೆ ನುಗ್ಗಿದೆ.
ಕಾರವಾರ, ಅಕ್ಟೋಬರ್ 21: ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈಕ್ಕೋಲ್ ನೌಕಾನೆಲೆಗೆ ದಾರಿ ತಪ್ಪಿ ಬಂದ ತಮಿಳುನಾಡಿನ ಮೀನುಗಾರಿಕಾ ಬೋಟ್ನ್ನು (fishing boat) ನೌಕಾಪಡೆ ವಶಕ್ಕೆ ಪಡೆದುಕೊಂಡಿದೆ. ಬೋಟ್ನಲ್ಲಿ ಐಸ್ ಖಾಲಿಯಾಗದ ಹಿನ್ನೆಲೆ ಬೋಟ್ ಬಂದರಿಗೆ ಬರಬೇಕಿತ್ತು. ಆದರೆ ಮೀನುಗಾರಿಕಾ ಬಂದರಿಗೆ ಬರುವ ಬದಲು ನೌಕಾನೆಲೆಗೆ ನುಗ್ಗಿದೆ. ಬೋಟ್ನ GPS ಸರಿಯಾದ ಮಾರ್ಗ ತೋರಿಸುವಲ್ಲಿ ವಿಫಲವಾಗಿ ಎಡವಟ್ಟು ಸಂಭವಿಸಿದೆ. ಮೀನುಗಾರಿಕಾ ಬೋಟ್ನಲ್ಲಿದ್ದವರ ಆಧಾರ್ ಕಾರ್ಡ್, ದಾಖಲೆ ಪರಿಶೀಲಿಸಿ ನಂತರ ಕರಾವಳಿ ಪಡೆಗೆ ನೌಕಾಪಡೆ ಸಿಬ್ಬಂದಿ ಒಪ್ಪಿಸಿದ್ದಾರೆ. ಕರಾವಳಿ ಕಾವಲು ಪಡೆ ದಾಖಲೆ ಪರಿಶೀಲಿಸಿ ಬಿಡುಗಡೆ ಬಗ್ಗೆ ತೀರ್ಮಾನ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.