Loading video

ಕೇಂದ್ರದಿಂದ ಬಿಡುಗಡೆಯಾಗುವ ಅನುದಾನವನ್ನು ಶತ ಪ್ರತಿಶತದಷ್ಟು ಉಪಯೋಗಿಸಬೇಕು: ಸಿದ್ದರಾಮಯ್ಯ

Updated on: May 14, 2025 | 5:22 PM

ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಲ್ಲಿ ಕೇಂದ್ರಕ್ಕಿಂತ ರಾಜ್ಯ ಸರ್ಕಾರಗಳೇ ಹೆಚ್ಚು ಖರ್ಚು ಮಾಡುತ್ತವೆ ಎನ್ನುವ ಸಿದ್ದರಾಮಯ್ಯ ಕೇಂದ್ರದಿಂದ ದ್ವೇಷದ ರಾಜಕಾರಣ ನಡೆಯುತ್ತಿದೆಯಾ ಅಂತ ಸುದ್ದಿಗಾರರೊಬ್ಬರು ಕೇಳಿದಾಗ ತಾನೀಗ ರಾಜಕೀಯದ ಬಗ್ಗೆ ಮಾತಾಡಲ್ಲ, ಆದರೆ ಕೇಂದ್ರ ಸರ್ಕಾರ ಒಪ್ಪಿಕೊಂಡಷ್ಟು ಅನುದಾನವನ್ನು ನೀಡಲೇಬೇಕು ಎಂದು ಹೇಳಿದರು.

ಬೆಂಗಳೂರು, ಮೇ 14: ನಗರದಲ್ಲಿಂದು ಕೇಂದ್ರ ಸರ್ಕಾರ ಪ್ರಾಯೋಜಕತ್ವದ ಯೋಜನೆಗಳ ಬಗ್ಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದಿಂದ ಬಿಡುಗಡೆಯಾಗುವ ಅನುದಾನವನ್ನು (Central Government grants) ಶತಪ್ರತಿದಷ್ಟು ಖರ್ಚು ಮಾಡುವುದು ಅತ್ಯಂತ ಅವಶ್ಯಕವಾಗಿದೆ, ಕಳೆದ ಸಾಲಿನಲ್ಲಿ ಅನುದಾನದ ಶೇಕಡ 83 ರಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು. ಅಧಿಕಾರಿಗಳನ್ನು ಕೇಳಿದರೆ ಅನದಾನವನ್ನು ಕೇಂದ್ರ ತಡವಾಗಿ ಬಿಡುಗಡೆ ಮಾಡಿರುವುದಕ್ಕೆ ಬಳಸಿಕೊಳ್ಳಲಾಗಿಲ್ಲ ಎನ್ನುತ್ತಾರೆ, ಅವರಿಗೆ ಶೇಕಡ 100ರಷ್ಟು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಮಂಡ್ಯದಲ್ಲಿ ರೈತಮಹಿಳೆ ಕೇಳಿದ ಪ್ರಶ್ನೆಗಳಿಗೆ ನಿರುತ್ತರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ